ಗೋಕುಲಂ ಹಾಗೂ ಬೃಂದಾವನ ಬಡಾವಣೆಯ ನಿವಾಸಿಗಳು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಉತ್ಸುಕರಾಗಿ ಚರಕ ಸರ್ಕಾರಿ ಆಯುರ್ವೇದ ಸ್ನಾತಕೋತ್ತರ ಕೇಂದ್ರ ಬಳಿ ನೆರೆದಿದ್ದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಸ್ ಬಿ ಎಂ ಮಂಜು ರವರು ಅಲ್ಲಿನ ಮೂಲಭೂತ ಸೌಕರ್ಯವನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯೆವಸ್ಥೆ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಕೊರೊನ ವೈರಸ್ ನಿಂದ ದೂರವಿರಲು ಉತ್ತಮವಾದ ಪೆÇೀಷಕಾಂಶವುಳ್ಳ ಆಹಾರವನ್ನು ಸೇವಿಸುವಂತೆ ಹಾಗೂ ಸಾರ್ವಜನಿಕವಾಗಿ ಅಂತರ ಕಾಯ್ದುಕೊಳ್ಳುವಂತೆ ಮನದಟ್ಟು ಮಾಡಿದರು. ಈ ಸಂದರ್ಭದಲ್ಲಿ ಚರಕ ಆಯುರ್ವೇದ ಸ್ನಾತಕೋತ್ತರ ಕೇಂದ್ರದ ಪೆÇ್ರಫೆಸ್ಸರ್ ಮುದ್ದಸಿರ್ ಅಜೀಜ್ ಖಾನ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು.