ಬಾದಾಮಿ ನಗರದ ಹೊರವಲಯದಲ್ಲಿರುವ ನೂತನ ಶ್ರೀಮತಿ ಬಸಮ್ಮ ಷಣ್ಮುಖಪ್ಪ ಹೊಸಗೌಡ್ರ ಸಮುದಾಯ ಭವನದಲ್ಲಿ ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿ ಮಹೇಶ ಎಸ್ ಹೊಸಗೌಡ್ರ ಅವರು,ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಟ್ಟಡ ಕಾರ್ಮಿಕರಾದ ಮಲ್ಲಪ್ಪ ವಡ್ಡರ, ಹುಸನವ್ವ, ಸಾವಿತ್ರಿ ಕಮಟರ್, ಬೇಬಿಜಾನ್, ಸಾವಿತ್ರಿ ಮಾದರ, ಮಹಿಬೂಬ ಹುಬ್ಬಳ್ಳಿ, ಮೌಲಾಲಿ ನಧಾಪ್, ಈರಯ್ಯ ಹಿರೇಮಠ ಇವರಿಗೆ ಉಡುಗೊರೆ ನೀಡಿ ಸನ್ಮಾನಿಸಿ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಮುಖಂಡ ಸಾಬಣ್ಣ ಹೊಸಗೌಡ್ರ, ಸಮುದಾಯ ಭವನದ ನಿರ್ವಾಹಕರು, ಸಿಬ್ಬಂದಿ ಉಪಸ್ಥಿತರಿದ್ದರು.