ಜಾಗೃತಿಗೆ ಸೈಕಲ್ ಮೂಲಕ ದೇಶ ಪರ್ಯಟನೆ ಬಾದಾಮಿ,ಮೇ2: ಪಶ್ಚಿಮ ಬಂಗಾಳದ ಚಿಲಿಗುಡಿಯಿಂದ ವ್ಯಕ್ತಿಯೊಬ್ಬ Sಚಿಜಿe ಆಡಿive Sಚಿಜಿe ಟiಜಿe ಅಭಿಯಾನಯೊಂದನ್ನು ಸೈಕಲ್ ಮೂಲಕ ಆರಂಭಿಸಿದ್ದಾರೆ. ಅವರೇ ಮಧೈ ಪೈಲ್ ಎಂಬುವವರು ಸೈಕಲ್ ಮೂಲಕ ದೇಶ ಪರ್ಯಟನೆ ಆರಂಭಿಸಿದ್ದು, ಸೈಕಲ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಮಧೈ ಪೈಲ್ 2020 ರಿಂದ ಸಂಚಾರ ಆರಂಭವಾಗಿದ್ದು, ರಸ್ತೆ ಸುರಕ್ಷತೆ ಅಭಿಯಾನ ಅಂಗವಾಗಿ ಶುಕ್ರವಾರ ರಾತ್ರಿ ಬಾದಾಮಿಗೆ ಬಂದು ತಲುಪಿದ್ದಾರೆ. ತಮಗೆ ಬೇಕಾದ ಬಟ್ಟೆ, ಇತರ ಅವಶ್ಯಕ ಸಾಮಗ್ರಿಗಳನ್ನು ಸೈಕಲ್ ಹಿಂದಗಡೆ ಇಟ್ಟುಕೊಂಡು ವಿನೂತನ ಜಾಗೃತಿ ಅಭಿಯಾನ ಮಾಡುತ್ತಿರುವ ಇವರ ಕಾರ್ಯ ಶ್ಲಾಘನೀಯ. ಇವರಿಗೆ ಬಾದಾಮಿ ನಗರದಲ್ಲಿ ಉಳಿದುಕೊಳ್ಳಲು ತಹಶೀಲ್ದಾರ್ ಸುಹಾಸ ಇಂಗಳೆ, ಸಿಪಿಐ ರಮೇಶ ಹಾನಾಪೂರ 2-3 ದಿನಗಳವರೆಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಊಟ ಸಪಹಾರ ಸಹಾಯ ಮಾಡಿದರು.