ಪಾಲಿಕೆಯಿಂದ ರಾಸಾಯನಿಕ ಸಿಂಪಡಣೆ

Near b b m p head offfice

ಬೆಂಗಳೂರು, ಮೇ.೧- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆ ನಗರಾದ್ಯಂತ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆ ಕಾರ್ಯವನ್ನು ಬಿಬಿಎಂಪಿ ಚುರುಕುಗೊಳಿಸಿದೆ.

ನಗರದ ಸಿಟಿ ಮಾರುಕಟ್ಟೆ, ಕೆಆರ್ ವೃತ್ತ, ಕಾರ್ಪೋರೇಷನ್ ವೃತ್ತ, ಕೆಎಸ್‌ಆರ್‌ಟಿಸಿ ಬಸ್ಸು ತಂಗುದಾಣ, ಮುಖ್ಯರಸ್ತೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಸಾವಿರಾರು ಲೀಟರ್‌ಗಳಷ್ಟು ಸೋಡಿಯಂ ಕ್ಲೋರೈಟನ್ನು ಅನ್ನು ಸಿಂಪಡಣೆ ಮಾಡಲಾಗುತ್ತಿದೆ.

ಸೋಂಕುಗಳನ್ನು ತಡೆಗಟ್ಟುವು ದರೊಂದಿಗೆ ಸೂಕ್ಷಜೀವಿಯ ಜೀವಕೋಶ ಗಳನ್ನು ಅಡ್ಡಿಪಡಿಸುವ ಸಾಮರ್ಥ್ಯವನ್ನೂ ಈ ರಾಸಾಯನಿಕವು ಹೊಂದಿದೆ. ನಗರದ ೧೯೮ ವಾರ್ಡ್ ಗಳಿಗೂ ಇದೇ ರೀತಿ ರಾಸಾಯನಿಕ ಸಿಂಪಡಣೆ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿವೊಬ್ಬರು ತಿಳಿಸಿದರು.