ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೈಮುಲ್ ನಿಂದ ಆಯುರ್ವೇದಿಕ್ ಹಾಲನ್ನು ಮಾರುಕಟ್ಟೆಗೆ ಬಿಡಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ತಿಳಿಸಿದರು. ಒಟ್ಟು ಏಳು ವಿವಿಧ ಬಗೆಯ ಆಯುರ್ವೇದಿಕ್ ಹಾಲುಗಳಾದ ತುಳಸಿ,ಅಶ್ವಗಂಧ, ಕಾಳು ಮೆಣಸು, ಲವಂಗ, ಶುಂಠಿ. ಅರಿಶಿನ ಹಾಗು ಕಷಾಯದ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದರು. ಈ ಆಯುರ್ವೇದಿಕ್ ಹಾಲುಗಳು 200 ಮಿ.ಲೀ ನಲ್ಲಿ ಲಬ್ಯವಿದ್ದು 20 ರೂ ಬೆಳೆಗೆ ಮಾರುಕಟ್ಟೆಯಲ್ಲಿ ಸಿಗಲಿದೆ ಇದು 6 ತಿಂಗಳವರೆಗೆ ಕೆಡದೆ ಇರುವ ಹಾಗೆ ಪ್ಯಾಕ್ ಮಾಡಲಾಗಿರುತ್ತದೆ ಮತ್ತು ಪ್ರಸ್ತುತ ಮಾರುಕಟ್ಟೆಯಲ್ಲಿ 2000 ಲೀ. ಹಾಲು ಲಭ್ಯವಿದ್ದು ಗ್ರಾಹಕರ ಪ್ರತಿಕ್ರಿಯೆಗೆ ಹಾಗು ಬೇಡಿಕೆಗೆ ಅನುಗುಣವಾಗಿ ಪೂರೈಸಲ್ಗುವುದು ಎಂದು ತಿಳಿಸಿದರು.