ಕಡ್ಡಾಯವಾಗಿ ಮಾಸ್ಕನ್ನು ಧರಿಸಿ, ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಲು ವಿ. ಬಿ. ಡಂಗನವರ ಪ್ರತಿಷ್ಠಾನದ(ರ) ಹುಬ್ಬಳ್ಳಿ ವತಿಯಿಂದ ಪ್ರತಿಷ್ಠಾನದ ಜಯಮ್ಮ, ಸದಾನಂದ ಡಂಗನವರ ಕರೆ ನೀಡಿ ರವಿ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸಿ ಜಾಗೃತಿ ಮೂಡಿಸಿದರು. ಈ ವೇಳೆ ಸವಿತಾ ಕುಂಟೆ, ವೀಣಾ ಪಾಟೀಲ್, ರುಕ್ಮಿಣಿ ಕುಲಕರ್ಣಿ, ಲಕ್ಕಮ್ಮ ಏಕಬೋಟೆ, ಓಂಕಾರ್ ಕುಂಟೆ ಉಪಸ್ಥಿತರಿದ್ದರು.