ಹೊಸಕೆರೆಹಳ್ಳಿ ವಾರ್ಡ್ 100 ಅಡಿ ರಿಂಗ್ ರಸ್ತೆ ಗುಪ್ತ ಕಾಲೇಜ್ ಬಳಿ ಸರ್ಕಾರ ಸುಮಾರು 3-4 ವರ್ಷಗಳ ಹಿಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ತಂಗುದಾನವನ್ನು ನಿರ್ಮಿಸಲಾಗಿತ್ತು. ಆದರೆ ಈಗ ಈ ಬಸ್ ತಂಗುದಾಣ ಮಾಯವಾಗಿದೆ. ಆದರೆ ಬಸ್ ತಂಗುದಾಣ ಎಲ್ಲಿ ಹೋಯಿತು ಇದನ್ನು ಯಾರು ಹೊಡೆದಾಕಿದರು ಎಂಬುದು ತಿಳಿದಿಲ್ಲ. ಬಿಬಿಎಂಪಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಲಕ್ಷಾಂತರ ರೂ ಸರ್ಕಾರಿ ವೆಚ್ಚದ ತಂಗುದಾಣ ಇಲ್ಲವಾಗಿರುವುದು ಆಶ್ಚರ್ಯ ಆಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.