ಜೈನಕಾಶಿ ಮಂದಿರದಿಂದ ವಿಗ್ರಹ
ಕಳವು: ಆರೋಪಿಗೆ ೧೦ ವರ್ಷ ಜೈಲು
ಮಂಗಳೂರು, ಎ.೨೩- ೨೦೧೩ ಜುಲೈ ೬ ರಂದು ಮೂಡಬಿದ್ರೆಯ ಜೈನ ಕಾಶಿ ಮಂದಿರದಿಂದ ವಿಗ್ರಹ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ತಮಿಳುನಾಡು ರಾಜ್ಯದ ಸೇಲಂ ಕೋರ್ಟ್ ೧೦ ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿಯನ್ನು ಒಡಿಶಾ ಮೂಲದ ಪ್ರೇಮಕುಮಾರ್ ಅಲಿಯಾಸ್ ಸಂತೋಷ್ ದಾಸ್(೩೮) ಎಂದು ಗುರುತಿಸಲಾಗಿದೆ. ಮೂಡಬಿದ್ರೆಯ ಜೈನ ಕಾಶಿ ಶ್ರೀ ಜೈನ ಮಠದ ಆಡಳಿತ ಕ್ಕೊಳಪಟ್ಟ ಗುರು ಬಸದಿ ಸಿದ್ದಾಂತ ಮಂದಿರಕ್ಕೆ ಗ್ಯಾಸ್ ಕಟ್ಟರ್ ಮೂಲಕ ಒಳ ಪ್ರವೇಶಿಸಿ ಅಮೂಲ್ಯ ವಿಗ್ರಹಗಳನ್ನು ಕಳವುಗೈದಿದ್ದ. ಈ ಪ್ರಕರಣದ ತನಿಖೆಯ ಬಳಿಕ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದು, ಆಗ ಆತ ಒಡಿಶಾ ಮತ್ತು ಕರ್ನಾಟಕದಲ್ಲಿ ೪೭ ಕಳ್ಳತನಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಇನ್ನು ಈ ಪ್ರಕರಣದ ತನಿಖೆ ನಡೆಸಿದ ತಮಿಳುನಾಡು ರಾಜ್ಯದ ಸೇಲಂ ಕೋರ್ಟ್ ಆರೋಪಿಗೆ ೧೦ ವರ್ಷ ಶಿಕ್ಷೆ ವಿಧಿಸಿದೆ.