ಹಿರಿಯೂರು ತಾಲ್ಲೂಕಿನ ಕಳವಿಬಾಗಿ ಗ್ರಾಮದ ಹಾಲುಮತ ಕುರುಬರ ಸಮಾಜದ ಹಿರಿಯ ಮುಖಂಡ ಎಂ.ಜೂಲಪ್ಪ (86) ರವರು ವಯೋ ಸಹಜ ಮೃತಪಟ್ಟಿದ್ದು ಪತ್ನಿ ಮಗ ಮತ್ತು ಐವರು ಪುತ್ರಿಯರು ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿರುತ್ತಾರೆ. ಅವರ ಮಗಳು ಶಾಂತಮ್ಮ ಎಂಬುವರು ತಂದೆಯ ಅಂತ್ಯ ಸಂಸ್ಕಾರದ ವೇಳೆ ತಂದೆಯ ಶವಕ್ಕೆ ಹೆಗಲು ಕೊಟ್ಟು ಹೊತ್ತು ಸಾಗಿ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.