ಶ್ರೀ ರಾಮನವಮಿಗೆ ಕೊರೊನಾ ಅಡ್ಡಿ

ಬೆಂಗಳೂರು,ಏ.೨೧- ಅತ್ಯಂತ ಸಡಗರ ಸಂಭ್ರಮದಿಂದ ರಾಜ್ಯಾದ್ಯಂತ ಆಚರಿಸುತ್ತಿದ್ದ ಶ್ರೀ ರಾಮ ನವಮಿಯ ಹಬ್ಬದ ಮೇಲೂ ಕೊರೊನಾ ಕರಿನೆರಳು ಆವರಿಸಿ ಕೊಂಡಿದೆ.
ಮಹಾಮಾರಿ ಕೊರೊನಾ ಎರಡನೇ ಅಲೆ ಮೊದಲ ಅಲೆಗಿಂತಲೂ ಭೀತಿ ಹುಟ್ಟಿಸಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಇದರ ನಡುವೆಯು ಜನರು ಶ್ರೀ ರಾಮನವಮಿ ಹಬ್ಬವನ್ನು ಮನೆಗಳಲ್ಲಿಯೇ ದೇವರಿಗೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಿದರು.
ರಾಜ್ಯಾದ್ಯಂತ ಯಾವುದೇ ಆಡಂಬರ ವಿಲ್ಲದೆ ಶ್ರೀ ರಾಮ ದೇವಸ್ಥಾನಗಳಲ್ಲಿ ದೇವರಿಗೆ ಅಭಿಷೇಕದೊಂದಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.
ಶ್ರೀ ರಾಮ ನವಮಿ ಬಂತೆಂದರೆ ಎಲ್ಲೆಲ್ಲೂ ಜನರಿಗೆ ನೀರು ಮಜ್ಜಿಗೆ ಪಾನಕ, ಹೆಸರು ಬೇಳೆ ಹಂಚಿ ಸಂಭ್ರಮದಿಂಧ ಆಚರಿಸಲಾಗುತ್ತಿತ್ತು, ಆದರೆ ಈ ಬಾರಿ ಆದ್ಯಾವುದೇ ಇಲ್ಲದೆ ಕೇವಲ ದೇವಾಲಯಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಶ್ರೀ ರಾಮ ನವಮಿ ಹಬ್ಬವನ್ನು ಸರಳವಾಗಿ ಆಚರಿಸಿದ್ದು ಕಂಡು ಬಂದಿತು.

ಶ್ರೀರಾಮ ನವಮಿ ದಿನವಾದ ಇಂದು ನಗರದ ಶ್ರೀ ರಾಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.