ಮಲ ಹೊರುವ ಪದ್ದತಿಯನ್ನು ನಿಷೇಧಿಸುವ ಮೂಲಕ ಮಾನವೀಯತೆಯನ್ನು ಎತ್ತಿಹಿಡಿದ ಕ್ರಾಂತಿಕಾರಿ ಹಾಗೂ ಬಹುಜನ ನಾಯಕ ಬಿ.ಬಸವಲಿಂಗಪ್ಪನವರ 100ನೇ ಜಯಂತ್ಯೋತ್ಸವದ ಅಂಗವಾಗಿ ಸಮತಾ ಸೇನಾ, ವಿವಿಧ ದಲಿತ ಸಂಘ ಸಂಸ್ಥೆಗಳ ವತಿಯಿಂದ ಹುಬ್ಬಳ್ಳಿ ಇಂದಿರಾಗಾಜಿನ ಮನೆಯ ಆವರಣದಲ್ಲಿನ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮತಾಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಬಿ.ಎಸ್.ಪಿಯ ರೇವಣಸಿದ್ದಪ್ಪ ದೇಸಾಯಿ, ಮಂಜಣ್ಣ ಉಳ್ಳಿಕಾಶಿ, ಹನಮಂತ ತಳವಾರ, ಲೋಹಿತ ಗಾಮನಗಟ್ಟಿ, ರಾಜು ಮರಿಗುದ್ದಿ, ಇಝಾಜ ಉಪ್ಪಿನ, ರಾಘವೇಂದ್ರ ಬಸವಂತಕರ, ಬಾಷಾ ಮಾಸನೂರ ಉಪಸ್ಥಿತರಿದ್ದರು.