
ಕಲಬುರಗಿ,ಮಾ.3: ನಗರದ ವಿವಿಧ ಕಡೆ ಬೈಕುಗಳನ್ನು ಕಳವು ಮಾಡಿದ ಮೂವರು ಮತ್ತು ಕದ್ದ ಮಾಲು ಖರೀದಿಸಿದ ಮೂವರು ಸೇರಿ ಒಟ್ಟು 6 ಜನರನ್ನು ಬಂಧಿಸಲಾಗಿದ್ದು,21 ಲಕ್ಷ ರೂ ಮೌಲ್ಯದ 23 ಬೈಕುಗಳು,ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಕಮಿಷನರ್ ಚೇತನ್ ಆರ್ ತಿಳಿಸಿದ್ದಾರೆ.
ವಾಹನಗಳ ಕಳವು ಆರೋಪದ ಮೇಲೆ ಖಾದ್ರಿ ಚೌಕ್ ಮಲ್ಲಿಕಾರ್ಜುನ ಗುಡಿ ಹತ್ತಿರದ ನಿವಾಸಿ ಶಿವರಾಜ ತಂದೆ ಬಾಬುರಾವ್ ಪೂಜಾರಿ (19), ಇಂದಿರಾ ನಗರ ಸೆಂಟ್ ಜೋಸೆಫ್ ಸ್ಕೂಲ್ ಹತ್ತಿರದ ನಿವಾಸಿ ಮರೆಪ್ಪಾ ಮಾರಿ ತಂದೆ ಸುಂಕಪ್ಪ ಕುಂಚಿಕೊರವೇರ, ರಾಮನಗರ ನಿವಾಸಿ ಹುಸೇನಿ ತಂದೆ ಮರೇಪ್ಪಾ ಸಿರಂ (22) ಎಂಬುವವರನ್ನು ಬಂಧಿಸಲಾಗಿದೆ.ಬಂಧಿತರಿಂದ ಕಲಬುರಗಿ ನಗರದಲ್ಲಿ ವಿವಿಧ ಕಡೆ ಕಳ್ಳತನ ಮಾಡಿದ್ದ 14 ಹೊಂಡಾ ಡಿಯೋ ಮೋಟಾರ್ ಸೈಕಲ್, 8 ಹಿರೋ ಸೈಂಡರ್ ಪ್ಲಸ್ ಮೋಟಾರ್ ಸೈಕಲ್ – 1 ಪಲ್ಸರ್ 220 ಮೋಟಾರ್ ಸೈಕಲ್ ಹೀಗೆ ಒಟ್ಟು 23 ಮೋಟಾರ್ ಸೈಕಲಗಳನ್ನು ಹಾಗೂ ಹೆಣ್ಣು ಮಗಳಿಂದ ಸುಲಿಗೆ ಮಾಡಿಕೊಂಡು ಹೋಗಿದ್ದ 1 ಮೊಬೈಲನ್ನು ವಶಪಡಿಸಿಕೊಂಡಿದ್ದು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಲಬುರಗಿ ನಗರದ ವಿವಿಧ ಪೆÇಲೀಸ್ ಠಾಣೆಗಳ ಒಟ್ಟು 15 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಮತ್ತು 1 ಸುಲಿಗೆ ಪ್ರಕರಣವನ್ನು ಪತ್ತೆ ಮಾಡಲಾಗಿದೆ. ಕಳ್ಳತನದ 7 ದ್ವಿಚಕ್ರ ವಾಹನ ಖರೀದಿ ಮಾಡಿದ್ದ ಇಂದಿರಾನಗರದ ನಿವಾಸಿ ಇಮ್ರಾನ್ ತಂದೆ ಖಾಜಾ ಪಟೇಲ್ (19), ಕನಕನಗರದ ಆಟೋ ಚಾಲಕ ಸಿದ್ದಲಿಂಗ ತಂದೆ ಲಕ್ಷ್ಮೀಕಾಂತ ಸಾವಳಗಿ (28) ಮತ್ತು ಸುಂದರ ನಗರದ ಫೀರೋಜ ತಂದೆ ಹಾಜಿಮಿಯಾ ಶೇಖ್(22) ಎಂಬುವವರನ್ನು ದಸ್ತಗಿರಿ ಮಾಡಿ ಕ್ರಮ ಜರುಗಿಸಲಾಗಿದೆ
ನಗರದಲ್ಲಿ ಮೋಟಾರ್ ಸೈಕಲ್ ಕಳ್ಳತನ ಮತ್ತು ಮೊಬೈಲ್ ಸುಲಿಗೆ ಪ್ರಕರಣಗಳನ್ನು ಭೇದಿಸಲು ನಗರ ಪೆÇಲೀಸ್ ಆಯುಕ್ತರಾದ ಚೇತನ್ ಆರ್, ಉಪ ಪೊಲೀಸ್ ಆಯುಕ್ತ ರಾದ ಆಡೂರು ಶ್ರೀನಿವಾಸುಲು, ಎ ಚಂದ್ರಪ್ಪಾ ಮತ್ತು ಕಲಬುರಗಿ ನಗರದ ದಕ್ಷಿಣ ಉಪವಿಭಾಗ ಎ.ಸಿ.ಪಿ ಭೂತೇಗೌಡ ವಿ.ಎಸ್ ರವರ ಮಾರ್ಗದರ್ಶನದಲ್ಲಿ ಬ್ರಹ್ಮಪುರ ಪೆÇಲೀಸ್ ಠಾಣೆಯ ಇನ್ಸಪೆಕ್ಟರ್ ಸಚಿನ್ ಎಸ್ ಚಲವಾದಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಬ್ರಹ್ಮಪುರ ಪೆÇಲೀಸ್ ಠಾಣೆಯ ಪಿ.ಎಸ್.ಐ ಗಳಾದ ರಾಜಪ್ಪ ಮುದ್ದಾ, ಅಶೋಕ ನಿಡೋದೆ ಮತ್ತು ಸಿಬ್ಬಂದಿಗಳಾದ ಮಹಿಬೂಬಸಾಬ,ಯಶವಂತರಾವ, ಶಿವಪ್ರಕಾಶ,ಅಶೋಕ, ರಾಮು ಪವಾರ,ಸಂತೋಷಕುಮಾರ, ಶಿವಶರಣಪ್ಪ , ಬಸವರಾಜ , ನವೀನ್ ಕುಮಾರ, ಕಲ್ಯಾಣಕುಮಾರ , ಜ್ಯೋತಿ ಇವರುಗಳನ್ನೊಳಗೊಂಡ ತಂಡವು ಕರ್ತವ್ಯ ನಿರ್ವಹಿಸಿದ್ದು, ಪೆÇಲೀಸ್ ಆಯುಕ್ತರು ಈ ತಂಡಕ್ಕೆ ಹತ್ತು ಸಾವಿರ ರೂಗಳ ನಗದು ಬಹುಮಾನ ನೀಡಿದ್ದಾರೆ