
ಕಲಬುರಗಿ,ಮಾ 10: ಜೇವರಗಿ ತಾಲೂಕಿನ ಕೋಳಕೂರ (ಕೋಮಲಿಪೂರ)ದಲ್ಲಿ ಮಾ.21 ರಿಂದ 23 ರವರೆಗೆ ಸಿದ್ಧಬಸವೇಶ್ವರ ಜಾತ್ರೆ ನಡೆಯಲಿದೆ.ಮಾ.17ರಿಂದ 21ರವರೆಗೆ ಪ್ರತಿದಿನ ರಾತ್ರಿ 8ರಿಂದ ಮಾತೋಶ್ರೀ ಜ್ಞಾನೇಶ್ವರಿ ದೇವಿ ಅವರಿಂದ ಪ್ರವಚನ ನಡೆಯಲಿದೆ.ಕೋಳಕೂರು ಹಿರೇಮಠ,ಕಲಬುರಗಿ ರೋಜಾಮಠದ ಕೆಂಚಬಸವ ಶಿವಾಚಾರ್ಯರು ಸಾನಿಧ್ಯವಹಿಸುವರು.21 ರಂದು ವೆಂಕಟೇಶ ಜನಾದ್ರಿ ರಚಿತ ಸಿದ್ಧಿಯಿಂದ ಸಿದ್ಧರಾದ ಶ್ರೀ ಸಿದ್ಧಬಸವೇಶ್ವರರು ಕೃತಿ ಬಿಡುಗಡೆಯಾಗಲಿದೆ. ರಾತ್ರಿ 10.30ರಿಂದ ಗೀಗೀ ಪದಗಳ ಕಾರ್ಯಕ್ರಮವಿದೆ.22 ರಂದು ಸಿದ್ಧಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರವಂತರ ಸೇವೆ, ನಂದಿಕೋಲು ಸಹಿತ ಪಲ್ಲಕ್ಕಿ ಮೆರವಣಿಗೆ ಸಾಗಿ ಭೀಮಾನದಿಯಲ್ಲಿ ಸಿದ್ಧಬಸವೇಶ್ವರ ಗಂಗಾಸ್ನಾನ ನಂತರ ಸಂಜೆ 5 ಗಂಟೆಗೆ ಕಳಸಾರೋಹಣ, ರಾತ್ರಿ 9ಕ್ಕೆ ಶ್ರೀ ರೇಣುಕಾ ಮಹಾತ್ಮೆ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.23 ರಂದು ಮುಂಜಾನೆ 8 ಕ್ಕೆ ಜಂಗೀ ಪೈಲ್ವಾನರಿಂದ ಕುಸ್ತಿ ಹಾಗೂ ದನಗಳ ಜಾತ್ರೆ ನಡೆಯುತ್ತದೆ ಎಂದು ವಿಶ್ವರಾಧ್ಯ ಸೇವಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಅಂಬಲಗಿ ಅವರು ತಿಳಿಸಿದ್ದಾರೆ.