21 ನೇ ಕಲ್ಯಾಣ ಪರ್ವದ ಭಿತ್ತಿಪತ್ರ ಕೇಂದ್ರ ಸಚಿವ ಖೂಬಾರಿಂದ ಬಿಡುಗಡೆ

ಬೀದರ:ಸೆ.20: ಲಿಂ. ಲಿಂಗಾನಂದ ಸ್ವಾಮಿಗಳ ಹಾಗೂ ಲಿಂ. ಮಾತೆ ಮಹಾದೇವಿ ಅವರ ಸಂಕಲ್ಪದಂತೆ ಅಕ್ಟೋಬರ್ 1 ಮತ್ತು 2 ರಂದು ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ನಡೆಯಲಿರುವ 21ನೇ ಕಲ್ಯಾಣ ಪರ್ವದ ಭಿತ್ತಿಪತ್ರವನ್ನು ಕೇಂದ್ರ ನವೀಕರಿಸಬಹುದಾದ ಇಂಧನಗಳ ಮೂಲ ಹಾಗೂ ರಾಸಾಯನಿಕ ರಸಗೊಬ್ಬರ ಸಚಿವರಾದ ಭಗವಂತ ಖೂಬಾ ಬೀದರನ ಅವರ ಗೃಹಕಚೇರಿಯಲ್ಲಿ ಬಿಡುಗಡೆ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷ ನಡೆಯುವ ಕಲ್ಯಾಣ ಪರ್ವ ಯಶಶ್ವಿಯಾಗಿ ಜರುಗಲಿ. ನಮ್ಮ ಸಹಕಾರ ನಿರಂತರ ಇರಲಿದೆ. ಕಾರ್ಯಕ್ರಮಕ್ಕೆ ಬಂದು ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದರು. ಇದೇ ವೇಳೆ ಕಲ್ಯಾಣ ಪರ್ವ ಉತ್ಸವ ಸಮಿತಿಯ ಪ್ರಧಾನ ಸಂಘಟಕರಾದ ಪೂಜ್ಯ ಶ್ರೀ ಡಾ. ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಪೂಜ್ಯ ಪ್ರಭುಲಿಂಗ ಸ್ವಾಮೀಜಿ, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಬಸವಂತರಾವ ಬಿರಾದಾರ, ಮಲ್ಲಿಕಾರ್ಜುನ ಶೆಂಬೆಳ್ಳಿ, ಸಂದೀಪ ರಾಗಾ ಸೇರಿದಂತೆ ಇತರರಿದ್ದರು.