21 ದ್ವಿಚಕ್ರವಾಹನ ಕಳ್ಳನ ಬಂಧನ

????????????????????????????????????

ಸಂಜೆವಾಣಿ ವಾರ್ಥೆ
ಸಿರುಗುಪ್ಪ ಜ 14 : ನಗರ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯದ ವಿವಿಧ ಭಾಗಗಳಲ್ಲಿ ದ್ವಿಚಕ್ರ ಕಳ್ಳತನ ಮಾಡಿದ ಆರೋಪಿ ಮುಲ್ಲಾ ಲತೀಫ್ ಮತ್ತು 21 ಬೈಕ್‍ಗಳನ್ನು ನಗರದ ಪೋಲೀಸರು ವಶಪಡಿಸಿಕೊಂಡು ಗುರುವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಡಿವೈಎಸ್‍ಪಿ ಎಂ.ಬಿ.ಸತ್ಯನಾರಾಯಣ ತಿಳಿಸಿದ್ದಾರೆ.
   ನಂತರ ಮಾತನಾಡಿದ ಅವರು ನೆರೆಯ ಸೀಮಾಂಧ್ರ ಪ್ರದೇಶದ ಅನುವಾಳು ಗ್ರಾಮದ ಮುಲ್ಲಾ ಲತೀಫ್ ಎನ್ನುವ ವ್ಯಕ್ತಿ ಬೈಕ್ ಕಳ್ಳ ನಗರದ 8, ಬಳ್ಳಾರಿ 4, ಆದೋನಿ 4, ಆಲೂರು 1, ಸಿಂಧನೂರು 2, ಬೆಂಗಳೂರು 1, ಕೋಸಗಿ 1 ಗ್ರಾಮಗಳ ಬಸ್ ನಿಲ್ದಾಣ, ಮನೆಮುಂದೆ ನಿಲ್ಲಿಸಿ ಹ್ಯಾಂಡ್‍ಲಾಕ್ ಮಾಡದ  ಬೈಕ್‍ಗಳನ್ನು ನಕಲಿ ಕೀಲಿ ಬಳಸಿ ಒಟ್ಟು 21 ಬೈಕ್‍ಗಳನ್ನು ಕಳ್ಳತನ ಮಾಡಿ, ನಂಬರ್ ಪ್ಲೇಟ್ ತೆಗೆದುಹಾಕಿ ಬಸ್ ನಿಲ್ದಾಣಗಳಲ್ಲಿ ಎರಡು ಮೂರು ದಿನ ನಿಲ್ಲಿಸಿ ನಂತರ ನನ್ನ ಹೆಂಡತಿಗೆ ಹೆರಿಗೆಗೆ ಹಣ ಬೇಕಾಗಿದೆ. ಬೈಕ್ ನಿಮ್ಮ ಬಳಿ ಇಟ್ಟುಕೊಂಡು ಸ್ವಲ್ಪ ಹಣ ನೀಡಿದರೆ  ನಂತರ ನಿಮ್ಮ ಹಣ ವಾಪಸ್ ನೀಡಿ ಬೈಕ್ ಹಿಂಪಡೆಯುತ್ತೇನೆ ಇಲ್ಲವೆ. ಬೈಕ್‍ನ ದಾಖಲೆಗಳನ್ನು ನೀಡುತ್ತೇನೆಂದು ಸಾರ್ವಜನಿಕರನ್ನು ನಂಬಿಸಿ ಬೈಕ್‍ಗಳನ್ನು ಮಾರಾಟ ಮಾಡುವುದು ಈತನ ವೃತ್ತಿಯಾಗಿದೆ.
    ವ್ಯಕ್ತಿಯೊಬ್ಬರಿಂದ ಕಳ್ಳತನವಾದ ದ್ವಿಚಕ್ರವಾಹನವು ನಗರದಲ್ಲಿ ತಿರುಗಾಡುತ್ತಿರುವುದನ್ನು ಬೈಕ್ ಮಾಲೀಕ ಗಮನಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದರಿಂದ ಕಳ್ಳ ಸಿಕ್ಕಿ ಬಿದ್ದಿದ್ದು, ಇನ್ನೂ ಇಬ್ಬರ ಹೆಸರು ಹೇಳುತ್ತಿದ್ದು, ಅವರ ಸಂಪೂರ್ಣ ಮಾಹಿತಿ ನೀಡದೇ ಇರುವುದರಿಂದ ಇನ್ನೂ ತನಿಖೆ ಮುಂದುವರೆದಿದ್ದು, ಈ ಪ್ರಕರಣದಲ್ಲಿ ಯಾರಿದ್ದಾರೆ ಎನ್ನುವುದನ್ನು ತನಿಖೆ ಮಾಡುತ್ತಿದ್ದೇವೆ. ತನಿಖೆಯ ನಂತರ ಈ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಬಂಧಿಸಿ ಪ್ರಕರಣದಲ್ಲಿ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
      ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್‍ಐ ಕೆ.ರಂಗಯ್ಯ, ಅಪರಾಧ ವಿಭಾಗದ ಪಿಎಸ್‍ಐ ನಾರಾಯಣಸ್ವಾಮಿ, ಎ.ಎಸ್.ಐಗಳಾದ ಶ್ರೀನಿವಾಸುಲು, ಪಂಪಾಪತಿ, ಸೂರ್ಯನಾರಾಯಣ, ಕೊಟ್ರಬಸಪ್ಪ, ಪೇದೆಗಳಾದ ಹಾಲೂರಯ್ಯ, ವೆಂಕಟೇಶ್, ಮುನಿಸ್ವಾಮಿ, ಬಾಲಚಂದ್ರ ರಾಥೋಡ್, ಆನಂದಕುಮಾರ್, ಭೀರಪ್ಪ, ಬಸವರಾಜ, ಈರಣ್ಣ, ಅಂಬರೇಶ ಇದ್ದರು