21ದಿನ ಯಶಸ್ವಿ ಪ್ರದರ್ಶನ ಕಂಡ ಗಿರ್ಕಿ ಚಲನಚಿತ್ರ


ಸಂಜೆವಾಣಿ ವಾರ್ತೆ
ಬಳ್ಳಾರಿ, .29: ಬಳ್ಳಾರಿಯ ರಾಘವೇಂದ್ರ ಚಿತ್ರಮಂದಿರದಲ್ಲಿ ಬಳ್ಳಾರಿಯ ಯುವ ನಿರ್ದೇಶಕರಾದ ಪಿಎಂ ವೀರೇಶ್ ರವರ ಗಿರ್ಕಿ ಕನ್ನಡ ಚಲನಚಿತ್ರ ಬಳ್ಳಾರಿಯಲ್ಲಿ ಯಶಸ್ವಿಯಾಗಿ 21 ದಿನ ಪೂರೈಸಿದ ಸಂದರ್ಭದಲ್ಲಿ, ಬಳ್ಳಾರಿ ಜಿಲ್ಲಾ ಜಾತ್ಯತೀತ ಜನತಾದಳ ಯುವ ಘಟಕದ ಅಧ್ಯಕ್ಷರಾದ ಡಿ ವಿಜಯಕುಮಾರ್, ಹಾಗೂ ಬಳ್ಳಾರಿಯ ಯುವ ಕಾಂಗ್ರೆಸ್ ಪದಾಧಿಕಾರಿಗಳಿಂದ ನಿರ್ದೇಶಕರಾದ ಪಿ ಎಂ ವೀರೇಶ್ ರವರಿಗೆ ಸನ್ಮಾನಿಸಿ ಹಾಗೂ ಕೇಕ್ ಕತ್ತರಿಸುವುದರ ಮೂಲಕ ಸಂಭ್ರಮಾಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಜೆ ವಿ ಮಂಜುನಾಥ್ ಹಾಗೂ ಡಿ ವಿಜಯಕುಮಾರ್ ರವರುಗಳು ಮಾತನಾಡಿ, ಗಣಿನಾಡು ಬಳ್ಳಾರಿಯಲ್ಲಿ ಕನ್ನಡ ಸಿನಿಮಾಗಳು ಉಳಿಯಬೇಕೆಂದರೆ ಕನ್ನಡ ಅಭಿಮಾನಿಗಳು ಹೆಚ್ಚು ಹೆಚ್ಚಾಗಿ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ನೋಡಿದಾಗ ಮಾತ್ರ ಕನ್ನಡ ಸಿನಿಮಾ ಚಿತ್ರ ತಂಡಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಹಾಗೂ ಕನ್ನಡ ಉಳಿಸಿ ಬೆಳೆಸಲು ಕನ್ನಡ ಸಿನಿಮಾಗಳು ಕೂಡ ಒಂದು ಭಾಗವಾಗಿರುತ್ತದೆ ಎಂದರು. ಮತ್ತು ಯಾವುದೇ ಸಿನಿಮಾಗಳು ಬಿಡುಗಡೆಯಾದ ಕನಿಷ್ಠ ನೂರು ದಿನಗಳವರೆಗೆ ಟಿವಿ ಚಾನಲ್ಗಳಲ್ಲಾಗಲಿ, ಓ ಟಿ ಟಿ ಪ್ಲಾಟ್ಫಾರ್ಮ್ ಗಳಲ್ಲಾಗಲಿ ಬರದಂತೆ ನೋಡಿಕೊಂಡಲ್ಲಿ ಪ್ರೇಕ್ಷಕರು ಖಂಡಿತವಾಗಿ ಸಿನಿಮಾ ಮಂದಿರಗಳಲ್ಲಿ ಬಂದು ನೋಡುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಪಿಎಂ ವೀರೇಶ್. ಡಿ ವಿಜಯಕುಮಾರ್. ಜೆ ವಿ ಮಂಜುನಾಥ್,ರಘು ಶೆಟ್ಟಿ, ಶ್ರೀಧರ್ ರಾಜು ಮುಕ್ಕಣ್ಣ ಹುಲುಗಪ್ಪ ಕೊರಲಗುಂದಿ ಪಂಪಾಪತಿ ಪಲ್ಲೆ ಸುರೇಶ್ ಪಾಟೀಲ್ ಪ್ರೀತಿ ಪಲ್ಲವಿ ನೂರು ಬಾಷಾ ತಬ್ರೀಶ್ ಚಾಂದ್ 
ಫರಾಜ್, ಇಮಾಮ್ ಹುಸೇನ್ ಪ್ರಭು ನಂದೀಶ್  ನಾಗರಾಜ್ ಮುಂತಾದ ಯುವ ಕಾರ್ಯಕರ್ತರು ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದರು.

Attachments area