ಬಾದಾಮಿ ನಗರದ ಸಾಯಿ ಸಾಂಸ್ಕøತಿಕ ಭವನದಲ್ಲಿ ಅಖಿಲ ಕರ್ನಾಟಕ ಎಸ್.ಸಿ, ಎಸ್.ಟಿ, ಒಬಿಸಿ, ಅಲ್ಪಸಂಖ್ಯಾತ ಘಟಕದ ವತಿಯಿಂದ ರವಿವಾರ ನಿವೃತ್ತ ಸೈನಿಕರಿಗೆ, ಸಾಧಕರಿಗೆ, ಕಲಾವಿದರಿಗೆ, ನಿವೃತ್ತ ನೌಕರರಿಗೆ, ವಿವಿದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಯಿತು. ಸಂಘಟಕ ನಿವೃತ್ತ ತಹಶೀಲ್ದಾರ್ ಭೀಮಪ್ಪ ತಳವಾರ, ಪುಂಡಲೀಕ ಕವಡಿಮಟ್ಟಿ, ನಾಗಪ್ಪ ದೊಡಮನಿ, ಕನಕಪ್ಪ ಪರಸನ್ನವರ, ನಿವೃತ್ತ ಸೈನಿಕ ಕೊಪ್ಪದ, ಕೆ.ಬಿ.ಗೌಡರ, ಬಸವರಾಜ ತಳವಾರ ಸೇರಿದಂತೆ ಗಣ್ಯರು ಹಾಜರಿದ್ದರು.