2030ರ ವೇಳೆಗೆ 1 ಲಕ್ಷ ಕೋಟಿ ರಪ್ತು ವಹಿವಾಟು ಗುರಿ: ಪಿಯೂಶ್ ಗೋಯಲ್

ನವದೆಹಲಿ, ನ.9- ದೇಶದಲ್ಲಿ 2030ರ ವೇಳೆಗೆ 1 ಲಕ್ಷ ಕೋಟಿ ರಪ್ತು ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.

ಜಗತ್ತಿನ ಒಟ್ಟಾರೆ ರಫ್ತು ವಹಿವಾಟಿನಲ್ಲಿ ಭಾರತದ ಪಾಲು ಶೇ.40 ರಷ್ಟು ಇರಲಿದೆ .ಈ ಹಿನ್ನೆಲೆಯಲ್ಲಿ 2030 ರ ವೇಳೆಗೆ ನಿಗಧಿತ ಗುರಿ ಸಾಧನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ರಫ್ತು ಉತ್ತೇಜನ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದರಿಂದ ದೇಶದಲ್ಲಿ ಉದ್ಯೋಗ ಅವಕಾಶವೂ ಹೆಚ್ಚಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಆರ್ಥಿಕ ಪ್ರಗತಿ ಸಾಧನೆಯಿಂದ ದೇಶದಲ್ಲಿ 2.6 ಕೋಟಿ ಉದ್ಯೋಗ ಸಿಗಲಿದೆ. ಈ ನಿಟ್ಟಿನಲ್ಲಿ 2030,ರ ವೇಳೆಗೆ ರಫ್ತು ಪ್ರಮಾಣ ಹೆಚ್ಚಳ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

2020-21 ರಲ್ಲಿ ಸೇವಾವಲಯದಲ್ಲಿ 89 ಬಿಲಿಯನ್ ಡಾಲರ್ ವಹಿವಾಡು ನಡೆಸಲಾಗಿದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಸಮಯದಲ್ಲಿ ಬಹುತೇಕ ಮಂದಿ ಮನೆಯಿಂದಲೇ ಕೆಲಸ ಮಾಡಿದ ಹಿನ್ನೆಲೆಯಲ್ಲಿ ರಫ್ತು ವಹಿವಾಟಿನ ಮೇಲೆ ಕಳದ ವರ್ಷ ಪರಿಣಾಮ ಬೀರಿತ್ತು. ಈ ವರ್ಷ ಆ ಪ್ರಮಾಣ ಮತ್ತಷ್ಡು ಹೆಚ್ಚಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಆರ್ಥಿಕ ಪ್ರಗತಿ ಚೇತರಿಕೆ ಹಾದಿಯಲ್ಲಿದೆ ಎಂದೂ ಕೂಡ ಅವರು ರ ಇಳಿಸಿದ್ದಾರೆ.