2030ಕ್ಕೆ ಬಾಲ್ಯ ವಿವಾಹ ಮುಕ್ತ ಭಾರತವಾಗಬೇಕು-ಶಶಿಧರ ಕೋಸಂಬೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ14: 2030ಕ್ಕೆ ಭಾರತ ಬಾಲ್ಯ ವಿವಾಹ ಮುಕ್ತ ದೇಶವಾಗಬೇಕು ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಹೊಸಪೇಟೆ ವಿಜಯನಗರ ಜಿಲ್ಲಾಡಳಿತದ ಸಹಯೋಗದೊಂದಿಗೆ ಬಾಲ್ಯ ವಿವಾಹ ನಿಷೇದ ಕಾಯ್ದೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಅನೇಕ ಹಂತದಲ್ಲಿ ಆಗುವ ಲೋಪ ಇಂದು ಈ ಕಾಯ್ದೆ ಸಂಖ್ಯೆ ವೃದ್ದಿಯಾಗಲು ಕಾರಣವಾಗಿದೆ ಸದ್ಯ ಕಲ್ಯಾಣ ಕರ್ನಾಟಕದಲ್ಲಿ 62ಸಾವಿರ ಮಕ್ಕಳ ಶಾಲೆಗಳಿಂದ ಹೊರಗಿದ್ದಾರೆ, ಕಳೆಡ ಮೂರು ವರ್ಷದಲ್ಲಿ ರಾಜ್ಯದಲ್ಲಿ 865ಪ್ರಕರಣ ದಾಖಲಾದರೆ ಈ ಪೈಕಿ ಕೇವಲ202ಪ್ರಕರಣಗಳಿಗೆ ಮಾತ್ರ ಶಿಕ್ಷೆಯಾಗಿದೆ. ಇದೆ ಅವಧಿಯಲ್ಲಿಯೇ 24945 ಶಿಶು ಮರಣವಾಗಿದ್ದು ಕಳವಳಕಾರಿ ಸಂಗತಿ ಈ ಬಗ್ಗೆ ಕೆಳೆ ಹಂತ ಅಂದರೆ ಗ್ರಾಮದಿಂದ ಹಿಡುದು ಎಲ್ಲಾ ಹಂತದ ಅಧಿಕಾರಿಗಳು ಗಮನ ಹರಿಸಲೇಬೇಕು ಎಂದರು.
ಎರಡು ದಿನದ ಕಾರ್ಯಾಗಾರ ಪ್ರಯೋಜನ ಪಡೆದ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಕಾರ್ಯದಲ್ಲಿ ಎಲ್ಲರೂ ಸಂಘಟಿತ ಪ್ರಯತ್ನದಿಂದ ಮಾತ್ರ ತಡೆಯಲು ಸಾಧ್ಯ‌ ಎಲ್ಲರೂ ಮಾದರಿ ಜಿಲ್ಲೆಯಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾಗೋಣಾ ಎಂದರು.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್  ಕುಮಾರ ಉಂಕಿ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಎಚ್.ಸಿ. ಹಾಜರಿದ್ದರು.