
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.09: ನಗರದಲ್ಲಿನ ಜಿಲ್ಲಾ ಪಂಚಾಯ್ತಿ ನಜೀರ್ ಸಭಾಂಗಣದಲ್ಲಿ ಇಂದು ನಡೆದ ಮಹಾನಗರ ಪಾಲಿಕೆಯ ಸಭೆಯಲ್ಲಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು ಅವರು
2023-24 ನೇ ಸಾಲಿಗೆ 153.33 ಕೋಟಿ ರೂಗಳ ಬಜೆಟ್ ಮಂಡನೆ ಮಾಡಿದರು.
ಘನತ್ಯಾಜ್ಯ ವಸ್ತು ನಿರ್ವಹಣೆ ಬಳಕೆ ಶುಲ್ಕದಿಂದ 4.20 ಕೋಟಿ ರೂ, ಪಾಲಿಕೆ ಕಟ್ಟಡಗಳ ಬಾಡಿಗೆಗಳಿಂದ 1.04 ಕೋಟಿ ರೂ, ಉದ್ದಿಮೆ ಪರವಾನಿಗೆಯಿಂದ 1.5 ಕೋಟಿ ರೂ, ನೀರಿನ ಬಳಕೆ ತೆರಿಗೆಯಾಗಿ 19 ಕೋಟಿ ರೂ, ಸಂಸ್ಕರಿಸಿದ ಕೊಳಚೆ ನೀರಿನ ಬಳಕೆಯಿಂದ 3.56 ಕೋಟಿ ರೂ, ಎಸ್ ಎಫ್ ಸಿ ಯಿಂದ 8.93 ಕೋಟಿ ರೂ,ಆಸ್ತಿ ತೆರಿಗೆಯಿಂದ 45 ಕೋಟಿ ರೂ, ಜಾಹಿರಾತು ತೆರಿಗೆಯಿಂದ 96 ಲಕ್ಷ ರೂ ಆದಾಯ ನಿರೀಕ್ಷಿಸಲಾಗಿದೆಂದು ತಿಳಿಸಿದರು.
ಇನ್ನು ನೌಕರರ ವೇತನಕ್ಕೆ 23.24 ಕೋಟಿ ರೂ, ಪತ್ರಿಕಾ ಜಾಹಿರಾತಿಗೆ 90 ಲಕ್ಷ ರೂ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 3 ಲಕ್ಷ ರೂ,ಬಳ್ಳಾರಿ ಉತ್ಸವಕ್ಕೆ 10 ಲಕ್ಷ ರೂ, ಇಂದಿರಾ ಕ್ಯಾಂಟೀನ್ ಗಾಗಿ 2.32 ಕೋಟಿ ರೂ, ವಿದ್ಯತ್ ಚಿತಾಗಾರಕ್ಕೆ 30 ಲಕ್ಷ ರೂ, 2.30 ಕೋಟಿ ರೂಗಳನ್ನು ನಗರ ಸೌಂದರೀಕರಣಕ್ಕೆ, ಬೀದಿ ದೀಪ ಮೊದಲಾದ ವಿದ್ಯತ್ ಬಳಕೆಗೆ 22 ಕೋಟಿ ರೂ, ಎಸ್ಸಿ ಎಸ್ಟಿ ಕಲ್ಯಾಣ ನಿಧಿಗೆ 1.53 ಕೋಟಿ ರೂ, ಸರ್ಕಲ್ ಗಳ ಹಸರೀಕರಣ ಮತ್ತು ಅಭಿವೃದ್ಧಿಗೆ 50 ಲಕ್ಷ ರೂ, ಒಳಚರಂಡಿ ಕೊಳವೆ ಮಾರ್ಗಗಳಿಗೆ 4ವರೆ ಕೋಟಿ ರೂ, ನೀರು ಸರಬರಾಜು ಪೈಪ್ ಗಳಿಗಾಗಿ 1.60 ಕೋಟಿ ರೂ, ಅರಣ್ಯೀಕರಣ ಮತ್ತು ಉದ್ಯಾನವನಗಳ ಅಭಿವೃದ್ಧಿಗೆ 1.25 ಕೋಟಿ ರೂ, ತೆರೆದ ಚರಂಡಿ, ಕಿರು ಸೇತುವೆಗಳ ನಿರಗಮಾಣಕ್ಕೆ 5.55 ಕೋಟಿ ರೂ, ರಸ್ತೆಗಳ ಸುಂದರೀಕರಣಕ್ಕೆ ಒಂದುವರೆ ಕೋಟಿ ರೂ, ಸ್ಮಶಾನಗಳ ಕಾಂಪೌಂಡ್ ನಿರ್ಮಾಣಕ್ಕೆ 10 ಕೋಟಿ ರೂ, ಮಹಾತ್ಮ ಗಾಂಧಿ ವಿಕಾಸ ಯೋಜನೆಗೆ 30 ಕೋಟಿ ರೂ, ಪುಟ್ ಪಾಥ್ ಗಳ ಅಭಿವೃದ್ಧಿಗೆ 21 ಕೋಟಿ ರೂ, ಅಮೃತ ಯೋಜನೆಗೆ 10 ಕೋಟಿ ರೂ, ರಸ್ತೆಗಳ ಗುಂಡಿಗಳನ್ನು ಮುಚ್ಚಲು ಎರೆಡು ಕೋಟಿ ರೂ, ತೆಗೆದಿರಿಸಿದೆ.
ವೆಟ್ ವೆಲ್ ಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ತೆಗೆದಿರಿಸಿದೆಯಾ ಎಂದು ಶಾಸಕ ಸೋಮಶೇಖರ ರೆಡ್ಡಿ ಅವರು ಕೇಳಿದಾಗ. ಇದಕ್ಕೆ ಕೆಎಂಇ ಅಸರ್ ಸಿ ಅನುದಾನದಡಿ ಈ ಕಾಮಗಾರಿ ತೆಗೆದುಕೊಳ್ಳಲಿದೆಂದು ಆಯುಕ್ತ ರುದ್ರೇಶ್ ಅವರು ತಿಳಿಸಿದರು.
ಆಟೋ ಸ್ಟ್ಯಾಂಡಗಳನ್ನು ನಿಯಮಿತವಾಗಿ ಮಾಡಲು ಪ್ರತಿ ಪಕ್ಷದ ನಾಯಕ ಸಿ.ಇಬ್ರಾಹಿಂ ಬಾಬು ಕೇಳಿದಾಗ, ಪೊಲೀಸರು ಸೂಚಿಸಿದ ಕಡೆ ಮಾಡಲಿದೆ. ಅನಧಿಕೃತವಾದುವುಗಳನ್ನು ತೆಗೆಯಬೇಕಿದೆ. ವ್ಯವಸ್ಥಿತವಾದ ಸ್ಟ್ಯಾಂಡ್ ಗಳನ್ನು ಮಾಡಿ ಅಲ್ಲಿ ವಿದ್ಯತ್ ಚಾರ್ಜ್ ರ್ ಗಳನ್ನು ಅಳವಡಿಸುವ ಚಿಂತನೆ ಇದೆಂದು ಹೇಳಿದರು.
ಸಭೆಯಲ್ಲಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ,
ಪಾಲಿಕ ಆಯುಕ್ತ ರುದ್ರೇಶ್ ,
ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ರಾಮಮಜಿನೇಯ, ರಾಜಶೇಖರ್, ಶ್ರೀನಿವಾಸ್ ಮೋತ್ಕರ್ ಪಾಲ್ಗೊಂಡಿದ್ದರು.