2022 ರಿಂದ ಐಪಿಎಲ್ ನಲ್ಲಿ ಹತ್ತು ತಂಡ

ಅಹಮದಾಬಾದ್,ಡಿ.24-ಇಂಡಿಯನ್ ಪ್ರೀಮಿಯರ್ ಲೀಗ್ – ಐಪಿಎಲ್ ನ 2022 ಆವೃತ್ತಿ ಯಿಂದ ಹತ್ತು ತಂಡ ಸೇರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ‌

ಅಹಮದಾಬಾದ್ ನಲ್ಲಿ ಇಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಇದಿವರೆಗೂ 8 ತಂಡಗಳಿದ್ದು ಮುಂದಿನ ವರ್ಷ 8 ತಂಡ ಕಣಕ್ಕಿಳಿಯಲಿವೆ.2022 ರಿಂದ ಹತ್ತು ತಂಡಗಳಿಗೆ ಅವಕಾಶ ಮಾಡಿಕೊಡಲಾಗಿದೆ.

2028 ರ ಒಲಂಪಿಕ್ ಗೆ ಕ್ರಿಕೆಟ್

ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಆಟವನ್ನು ಸೇರಿಸುವ ಕುರಿತು ಹಿಂದಿನಿಂದಲೂ ಮಾತುಕತೆಗಳು ನಡೆಯುತ್ತಿದ್ದವು ಇದೀಗ 2028 ರಲ್ಲಿ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿಸುವ ಸಂಬಂಧ ಚರ್ಚೆ ನಡೆದಿದೆ.

ಹೊಸ ವರ್ಷದ ಆರಂಭದಿಂದ ದೇಶದ ಕ್ರಿಕೆಟ್ ಪಂದ್ಯಗಳನ್ನು ಆರಂಭಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ.

ಜನವರಿಯಲ್ಲಿ ಆರಂಭದಲ್ಲಿ ಮುಸ್ತಕ್ ಅಲಿ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭಗೊಳ್ಳಲಿದೆ ಪುರುಷ ಮತ್ತು ಮಹಿಳೆಯರ ಕ್ರಿಕೆಟ್ ಪಂದ್ಯ ಆರಂಭವಾಗಲಿದೆ.

ರಾಜೀವ್ ಶುಕ್ಲ ಉಪಾಧ್ಯಕ್ಷ:.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷರಾಗಿ ಹಿರಿಯ ಆಡಳಿತಗಾರ ರಾಜೀವ್ ಶುಕ್ಲಾ ಅವರನ್ನು ನೇಮಕ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಹಿಂದೆ ರಾಜೀವ್ ಶುಕ್ಲಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಉತ್ತರಖಂಡದ ಮಹಿಂ ವರ್ಮಾ ಅವರ ಸ್ಥಾನಕ್ಕೆ ಹಿರಿಯ ಆಡಳಿತಗಾರ ರಾಜೀವ್ ಶುಕ್ಲಾ ಅವರನ್ನು ನೇಮಿಸಲು ನಿರ್ಧಾರ ಕೈಗೊಳ್ಳಲಾಗಿದೆ