2022ರ ದಿನದರ್ಶಿಕೆ ಬಿಡುಗಡೆ

ಕಲಬುರಗಿ: ನಗರದ ಗಂಜ ಬ್ಯಾಂಕ್ ಕಾಲೋನಿಯ ಈಶ್ವರ ದೇವಾಲಯದಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಹೊರ ತಂದಿರುವ 2022ರ ದಿನದರ್ಶಿಕೆಯನ್ನು ಪಾಳಾ ಸಂಸ್ಥಾನ ಹಿರೇಮಠದ ಗುರುಮೂರ್ತಿ ಶಿವಾಚಾರ್ಯರು ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಉಪನ್ಯಾಸಕರಾದ ಸಿದ್ಧಾನಂದ ಶಿವಯೋಗಿಗಳು, ಸುವರ್ಣ ಪಾಟೀಲ್, ಹರ್ಷವರ್ಧನ ಗುಗಳೆ, ಬಸವರಾಜ ಪಾಟೀಲ ಹೆರೂರ, ಮಚೆಂದ್ರನಾಥ ಮೂಲಗೆ, ರಾಜಶೇಖರ್ ಪಾಟೀಲ್ ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಕಶೆಟ್ಟಿ ಬಾಚನಾಳ, ಅಲ್ಲದೆ ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಕೇಂದ್ರ ಸಮಿತಿಯ ಸರ್ವ ಪದಾಧಿಕಾರಿಗಳು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.