2021-22ನೇ ಸಾಲಿಗೆ ಕ್ರಿಯಾಯೋಜನೆ ಸಿದ್ದಪಡಿಸಿ

ಕೋಲಾರ,ಮೇ.೨೯: ಕಲಿಕೆಗೆ ಧಕ್ಕೆಯಾಗದಂತೆ ಎಚ್ಚರವಹಿಸಿ, ವಾಟ್ಸ್‌ಫ್‌ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಧಕ್ಕೆಯಾಗದಂತೆ ಕ್ರಮವಹಿಸಿ ಮತ್ತು ೨೦೨೧-೨೨ನೇ ಶೈಕ್ಷಣಿಕ ಸಾಲಿಗೆ ಅಗತ್ಯವಿರುವ ಕ್ರಿಯಾಯೋಜನೆ ಸಿದ್ದಪಡಿಸಿಕೊಳ್ಳುವಂತೆ ಮುಖ್ಯಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಕರೆ ನೀಡಿದರು.
೨೦೨೧-೨೨ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳನ್ನು ಸಿದ್ದಪಡಿಸುವ ಕುರಿತು ಶ್ರೀನಿವಾಸಪುರ ಮತ್ತು ಮಾಲೂರು ತಾಲ್ಲೂಕುಗಳ ಮುಖ್ಯಶಿಕ್ಷಕರೊಂದಿಗೆ ನಡೆದ ಆನ್‌ಲೈನ್ ಝೂಮ್ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮಕ್ಕಳೊಂದಿಗೆ ವಾಟ್ಸಪ್, ಆನ್‌ಲೈನ್,ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದು, ಶೈಕ್ಷಣಿಕ ಪ್ರಗತಿಯನ್ನು ಗಮನಿಸುವಂತೆ ಶಿಕ್ಷಕರಿಗೆ ಸೂಚಿಸಿದ ಅವರು, ಇ-ಸಂವೇದ ಕಾಯಕ್ರಮವನ್ನು ಶಿಕ್ಷಕರು ವೀಕ್ಷಣೆ ಮಾಡಿ, ಮಕ್ಕಳ ಸಾಮಥ್ರ್ಯ ಗಳಿಕೆಯಾಗುವಂತೆ ಮಾಡಲು ಅನುಸರಿಸಬೇಕಾದ ಅಂಶಗಳನ್ನು ಅರ್ಥೈಸಿಕೊಳ್ಳಲು ಸೂಚಿಸಿದರು.
ಅದೇ ರೀತಿ ಮಕ್ಕಳು ಸಹಾ ಇ-ಸಂವೇದದಲ್ಲಿ ಪ್ರಸಾರವಾಗುವ ಪಾಠಗಳನ್ನು ವೀಕ್ಷಿಸಲು ಮಾರ್ಗದರ್ಶನ ನೀಡಿ ಜತೆಗೆ ಅವರ ಪೋಷಕರಿಗೂ ಮಕ್ಕಳ ಕಲಿಕೆ ಗಮನಿಸಲು ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು.
ಮಕ್ಕಳ ಪ್ರಗತಿ ಪರಿಶೀಲನೆಗೆ ವಾಟ್ಸ್‌ಫ್‌ನಲ್ಲಿ ಸೇತುಬಂಧಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸಿ ವಿದ್ಯಾರ್ಥಿಗಳ ಮುಂದಿನ ತರಗತಿಯ ಕಲಿಕೆ ಸುಲಭವಾಗುವಂತೆ ಮಾಡಿ ಎಂದರು.
೮ ಮತ್ತು ೯ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್‌ನ ಮಹತ್ವದ ಕುರಿತು ತಿಳಿಸಿ, ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಝೂಂ ಮೀಟಂಗ್ ಕರೆಸಿ ಅರ್ಥೈಸಿ ಎಂದು ಸೂಚಿಸಿದ ಅವರು ೮ ಮತ್ತು೯ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮಾಹಿತಿ ಸ್ಯಾಟ್ಸ್‌ನಲ್ಲಿ ದಾಖಲಿಸ
ಪ್ರಗತಿ ಪರಿಶೀಲಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಎಸ್ಸೆಸ್ಸೆಲ್ಸಿ ಪರೀಕ್ಷೆ ಕೋವಿಡ್ ಸೋಂಕು ಕಡಿಮೆಯಾದ ನಂತರ ನಡೆಯಲಿರುವುದರಿಂದ ಮಕ್ಕಳ ಪ್ರಗತಿಯ ಕುರಿತು ಗಮನಹರಿಸಲು ಕಿವಿಮಾತು ಹೇಳಿದ ಡಿಡಿಪಿಐ ಅವರು, ಮಕ್ಕಳು ‘ನನ್ನನ್ನೊಮ್ಮೆ ಗಮನಿಸಿ ಮತ್ತು ಅಧ್ಯಾಯವಾರು ಪ್ರಶ್ನೆಕೋಠಿಯನ್ನು ಅಭ್ಯಾಸ ಮಾಡಿ ದಿನಕ್ಕೊಂದು ವಿಷಯ ಬರೆದು ವಾಟ್ಸಫ್‌ನಲ್ಲಿ ಅಪ್‌ಲೋಡ್ ಮಾಡಲು ತಿಳಿಸಿ, ಶಿಕ್ಷಕರು ಮೌಲ್ಯಮಾಪನ ನಡೆಸಲು ಸೂಚಿಸಿದರು.
ವಾಟ್ಸಫ್‌ನಲ್ಲಿ ಶಿಕ್ಷಕರು ನೀಡುವ ಸಲಹೆ ಪಾಲಿಸಿ, ಪುನರಾವರ್ತನಾ ಕಾರ್ಯಕ್ರಮದಲ್ಲಿ ಉತ್ತಮವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರವನ್ನು ಆನ್‌ಲೈನ್ ಮೂಲಕ ಕಳುಹಿಸಿ ಪ್ರೋತ್ಸಾಹಿಸಲು ಸಲಹೆ ನೀಡಿದರು.
ಮಕ್ಕಳು ಕಲಿಕಾಭ್ಯಾಸ ಮುಂದುವರೆಸಲು ಅನುವಾಗುವಂತೆ ಅವರ ಸಂಪರ್ಕದಲ್ಲಿರಿ, ಇಲ್ಲವಾದಲ್ಲಿ ಮುಂದಿನ ಶೈಕ್ಷಣಿಕ ಪ್ರಗತಿಗೆ ಹಾನಿಯಾದೀತು ಎಂದು ಎಚ್ಚರಿಸಿದ ಅವರು ಶಿಕ್ಷಕರು ಬದ್ದತೆಯಿಂದ ಮಕ್ಕಳನ್ನು ಗಮನಿಸಲು ಸೂಚಿಸಿದರು.
ಸಭೆಯಲ್ಲಿ ವಿಷಯ ಪರಿವೀಕ್ಷಕರು, ಎರಡೂ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲಾ ಸರ್ಕಾರಿ,ಅನುದಾನಿತ,ಖಾಸಗಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಪಾಲ್ಗೊಂಡಿದ್ದರು.