2020 ರಲ್ಲಿ ಬಾಕ್ಸ್ ಆಫೀಸ್ ನ್ನು ಹಿಂದಿಕ್ಕಿದ ಓಟಿಟಿ

೨೦೨೦ರ ಈ ವರ್ಷ ಎಂಟರ್ಟೈನ್ಮೆಂಟ್ ಪ್ರಪಂಚದಲ್ಲಿ ಮನೆ ಮನೆಯಲ್ಲಿ ಟಿವಿ ಫೇವರಿಟ್ ಆಗಿದೆ.
ಅಂತೆಯೇ ಬಾಕ್ಸ್ ಆಫೀಸ್ ನಲ್ಲಿ ೨೦೨೦ ರ ಸಂಪಾದನೆ ಕೇವಲ ೮೨೬ ಕೋಟಿ ರೂಪಾಯಿ ಮಾತ್ರ. ಕಳೆದ ವರ್ಷ ೨೦೧೯ರಲ್ಲಿ ಐದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಸಂಪಾದನೆ ಆಗಿತ್ತು. ಅರ್ಥಾತ್ ಈ ವರ್ಷ ೮೪ ಶೇಕಡಾ ಸಂಪಾದನೆ ಕಡಿಮೆಯಾಗಿದೆ.
ಓವರ್ ದ ಟಾಪ್ ಅರ್ಥಾತ್ ಓಟಿಟಿಯ ರೆವೆನ್ಯೂ ಈ ವರ್ಷ ೨೧,೮೦೦ ಕೋಟಿ ರೂಪಾಯಿಗೆ ತಲುಪುತ್ತಿದೆ. ಓಟಿಟಿ ರೆವೆನ್ಯೂ ಈ ವರ್ಷ ೨೬ ಶೇಕಡಾ ವೃದ್ಧಿಯಾಗಿರುವುದು ಕೇಳಿಬಂದಿದೆ.
ಓಟಿಟಿಯ ಸಬ್ ಸ್ಕ್ರೆಬರ್ ಈ ವರ್ಷ ೪೭ ಶೇಕಡಾ ವೃದ್ಧಿಯಾಗಿದೆ. ಬ್ರಾಂಡ್ ಬ್ಯಾಂಡ್ ಇಂಡಿಯಾ ಫೋರಮ್(BIF) ಅನುಸಾರ ಲಾಕ್ಡೌನ್ ಸಮಯ ಓಟಿಟಿಯಲ್ಲಿ ೬೫ ಶೇಕಡಾ ಕಂಟೆಂಟ್ ಹಳ್ಳಿಗಳಲ್ಲಿ ನೋಡಲಾಗಿದೆಯಂತೆ.
ಓಟಿಟಿಯಲ್ಲಿ ದೊಡ್ಡ ಬಜೆಟ್ ನ ಫಿಲ್ಮ್ ಗಳಿಗಿಂತ ಕೆಲವು ಚಿಕ್ಕ ಫಿಲ್ಮ್ ಗಳಿಗೆ ಬಹಳ ಲಾಭವು ದೊರೆತಿದೆ.


ಅಕ್ಷಯ್ ಕುಮಾರ್ ರ ’ಲಕ್ಷ್ಮಿ’ ಫಿಲ್ಮ್ ನ ಡಿಜಿಟಲ್ ರೈಟ್ಸ್ ೧೨೫ ಕೋಟಿ ರೂಪಾಯಿಗೆ ಮಾರಲಾಗಿದೆ. ಅಕ್ಷಯ್ ರ ಫೀಸ್ ಸುಮಾರು ೧೦೦ ಕೋಟಿ ರೂಪಾಯಿಗೆ ಹತ್ತಿರವಿದೆ .(ಇದರಲ್ಲಿ ಸೈನಿಂಗ್ ಅಮೌಂಟ್- ಪ್ರಾಫಿಟ್ ಶೇರಿಂಗ್ ಸೇರಿ) ಮತ್ತು ಬೇರೆ ಆರ್ಟಿಸ್ಟ್ ಫೀಸ್ ಮತ್ತು ಫಿಲ್ಮ್ ನ ಟೀಮ್ ಫೀಸ್. ಅದೇ ರೀತಿ ೨೫ ಕೋಟಿ ರೂಪಾಯಿಗೆ ನಿರ್ಮಿಸಲಾದ ’ಲೂಡೋ’ ೩೫ ಕೋಟಿ ರೂ.ರೈಟ್ಸ್ ನಲ್ಲಿ ಮಾರಲಾಗಿದೆ.


ಇನ್ನು ವಿದ್ಯಾಬಾಲನ್ ಅವರ ’ಶಕುಂತಳಾ ದೇವಿ’ಯ ಬಜೆಟ್ ೨೫ರಿಂದ ೩೦ ಕೋಟಿ ರೂಪಾಯಿ ನಡುವೆ ಇದ್ದರೂ ಇದರ ಡಿಜಿಟಲ್ ರೈಟ್ ೪೦ ಕೋಟಿ ರೂಪಾಯಿಗೆ ಮಾರಲಾಗಿದೆ.
೨೦೨೨ ರ ತನಕ ಒಟಿಟಿಯ ರವೆನ್ಯೂ ೩೩,೮೦೦ ಕೋಟಿ ರೂಪಾಯಿ ತನಕ ತಲುಪುವ ನಿರೀಕ್ಷೆಯಿದೆ.

ಫಿಲ್ಮ್ ಇಂಡಸ್ಟ್ರಿಯ ಸ್ಥಿತಿ ಮಾರ್ಚ್ ೨೦೨೧ ರ ಮೊದಲು ಸುಧಾರಿಸುವ ಹೆಚ್ಚಿನ ಉಮೇದು ಇರಿಸುವಂತಿಲ್ಲ.

ಕರಣ್ ಜೋಹರ್ ಗೆ ದೆಹಲಿ ಹೈಕೋರ್ಟ್ ನಿಂದ ಸಮನ್ಸ್

ದೆಹಲಿ ಹೈಕೋರ್ಟ್ ಕಾಪಿರೈಟ್ ಪ್ರಕರಣದಲ್ಲಿ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ ನಿಂದ ಉತ್ತರವನ್ನು ನೀಡುವಂತೆ ಸೂಚಿಸಿದೆ.
’ಇಂಡಿಯನ್ ಸಿಂಗರ್ಸ್ ರೈಟ್ಸ್ ಅಸೋ ಸಿಯೇಶನ್’ (ISRA) ಹೈಕೋರ್ಟಿನಲ್ಲಿ ನೀಡಿದ ದೂರನ್ನು ಮುಂದಿಟ್ಟು ಕರಣ್ ಜೋಹರ್ ಅವರ ಪ್ರೋಡಕ್ಷನ್ ಹೌಸ್ ಗೆ ಸಮನ್ಸ್ ಜಾರಿಗೊಳಿಸಿದೆ.
ISRA ಫಿಲ್ಮ್ “ಗುಂಜನ್ ಸಕ್ಸೇನಾ ದ ಕಾರ್ಗಿಲ್ ಗರ್ಲ್”ನಲ್ಲಿ ತನ್ನ ಮೂರು ಹಾಡುಗಳನ್ನು ಕಮರ್ಷಿಯಲ್ ಬಳಕೆ ಮಾಡಿದ ಆರೋಪ ಹೊರಿಸಿದ್ದು ,ಈ ವಿಷಯದಲ್ಲಿ ರಾಯಲ್ಟಿ ನೀಡುವಂತೆ ಕರಣ್ ಜೋಹರ್ ಗೆ ಬೇಡಿಕೆ ಮುಂದಿಟ್ಟಿದೆ.


ಕೋರ್ಟು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ೧೨ ಮಾರ್ಚ್ ೨೦೨೧ಕ್ಕೆ ಇರಿಸಿದೆ.
ಕರಣ್ ಜೋಹರ್ ರ ಈ ಫಿಲ್ಮ್ ನಲ್ಲಿ ISRA ಇದರ ಮೂರು ಹಾಡುಗಳನ್ನು ಗುಂಜನ್ ಸಕ್ಸೇನಾ ……ಫಿಲ್ಮ್ ಗೆ ಬಳಸಿದ ಆರೋಪವನ್ನು ಮಾಡಿರುತ್ತದೆ. ISRA ದ ಆರೋಪದಂತೆ ಧರ್ಮಾ ಪ್ರೊಡಕ್ಷನ್ ’ಗುಂಜನ್ ಸಕ್ಸೇನಾ ದ ಕಾರ್ಗಿಲ್ ಗರ್ಲ್’ ನಲ್ಲಿ ಮೂರು ಫಿಲ್ಮ್ ಗಳ ಮೂರು ಹಾಡುಗಳನ್ನು ಬಳಸಿ ಕೊಂಡಿದೆ. ಈ ಮೂರು ಹಾಡುಗಳೆಂದರೆ-
ಏಜೀ ಓಜೀ…..( ರಾಮ್ ಲಖನ್),
ಚೋಲಿ ಕೆ ಪೀಚೆ ಕ್ಯಾ ಹೈ ( ಖಳ್ ನಾಯಕ್),
ಸಾಜನ್ ಜೀ ಘರ್ ಆಯೆ ಹೈ( ಕುಛ್ ಕುಛ್ ಹೋತಾ ಹೈ). ಈ ಬಗ್ಗೆ ತನಗೆ ರಾಯಲ್ಟಿ ನೀಡುವಂತೆ ISRA ಕೇಳಿದೆ.


ಧರ್ಮಾ ಪ್ರೊಡಕ್ಷನ್ ನ ಬಯೋಪಿಕ್ ಗುಂಜನ್ ಸಕ್ಸೇನಾ …..ಮೊದಲಿಂದಲೂ ವಿವಾದದಲ್ಲಿದೆ. ೧೨ ಆಗಸ್ಟ್ ೨೦೨೦ಕ್ಕೆ ರಿಲೀಸ್ ಆದ ನಂತರ ಇಂಡಿಯನ್ ಏರ್ ಪೋರ್ಸ್ ಈ ಫಿಲ್ಮ್ ನಲ್ಲಿ ವಾಯುಸೇನೆಯ ಕುರಿತಂತೆ ತಪ್ಪು ಅಭಿಪ್ರಾಯಗಳನ್ನು ತೋರಿಸಿದೆ ಎಂದು ಆರೋಪಿಸಿತು.( IAF)ವಾಯುಸೇನೆಯಲ್ಲಿ ಮಹಿಳೆಯರ ಜೊತೆ ಭೇದಭಾವ ಮಾಡುತ್ತದೆ ಎನ್ನುವ ಅರ್ಥ ಬರುವಂತೆ ಫಿಲ್ಮ್ ನಲ್ಲಿ ಚಿತ್ರಣವಿರುವುದಾಗಿ ಆರೋಪ ವನ್ನು ವಾಯುಸೇನೆ ಹೊರಿಸಿತ್ತು .
ಆದರೆ ಕರಣ್ ಜೋಹರ್ ಇದನ್ನು ನಿರಾಕರಿಸಿದ್ದು ನಾವು ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಗೌರವ ನೀಡಿದ್ದೇವೆ ಎಂದಿದ್ದರು.