2018ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಗೆಲ್ಲಲು ಅಂಬರೀಶ್ ಕಾರಣ: ಸುಮಲತಾ

ಮಂಡ್ಯ: ಏ.21:- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಪಾಲಿಟಿಕ್ಸ್ ಹೆಚ್ಚು ಸದ್ದು ಮಾಡುತ್ತಿದ್ದು ದಳಪತಿಗಳ ವಿರುದ್ಧ ಸಂಸದೆ ಸುಮಲತಾ ಸಮರ ಸಾರಿದ್ದಾರೆ.
ಇನ್ನು ಗುರುವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುಮಲತಾ ಜೆಡಿಎಸ್? ವಿರುದ್ಧ ಹರಿಹಾಯ್ದಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಪ್ರಚಾರ ಜೋರಾಗಿರುತ್ತದೆ ಬಿಜೆಪಿ ಪರ ಜನರ ಒಲವಿದೆ. ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪರ ವಾತವರಣ ಇದೆ ಜೆಡಿಎಸ್ ಬಂಡಾಯ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ನೂರಾರು ವರ್ಷಗಳ ಸಾಮ್ರಾಜ್ಯಗಳೇ ನೆಲಕ್ಕುರುಳಿವೆ ಹಾಗಾಗಿ ಭದ್ರಕೋಟೆ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ. ರಾಜಕೀಯದಲ್ಲಿ ಯಾರಿಗೂ ಯಾವುದು ಭದ್ರಕೋಟೆ ಅಲ್ಲ ನಿಮ್ಮ ಕೆಲಸ ಮಾತ್ರ ಜನರ ಮನಸ್ಸಲ್ಲಿ ಶಾಶ್ವತ. ಅಶೋಕ್ ಜಯರಾಂಗೆ ಜೆಡಿಎಸ್ ಮೋಸ ಮಾಡಿದೆ ಇದು ಮಂಡ್ಯ ಜನರಿಗೆ ಗೊತ್ತಿದೆ. ಈ ಬಾರಿ ಮಂಡ್ಯದಲ್ಲಿ ಅಶೋಕ್ ಗೆಲ್ಲಲಿದ್ದಾರೆ ನಮ್ಮ ಟಾರ್ಗೆಟ್ ಭ್ರಷ್ಟ ರಾಜಕಾರಣಿಗಳು ಮಂಡ್ಯದ 6 ಕ್ಷೇತ್ರಗಳ ಶಾಸಕರು ಅದರಲ್ಲೂ ಪಾಂಡವಪುರ, ಶ್ರೀರಂಗಪಟ್ಟಣದಲ್ಲಿ ಅದು ಪ್ರೂವ್ ಆಗಿದೆ. ರಾಜಕಾರಣಕ್ಕೆ ಒಳ್ಳೆಯ ಜನರು ಬರಬೇಕು ವ್ಯವಸ್ಥೆ ಬದಲಾಗಬೇಕು, ಮಂಡ್ಯ ರಾಜಕಾರಣ ಸ್ವಚ್ಛವಾಗಬೇಕು ಈ ಬಾರಿ ಜನರು ಸರಿಯಾದ ನಿರ್ಧಾರ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.
ನನ್ನ ಬೆಂಬಲ ಬಿಜೆಪಿಗೆ ಸೂಚಿಸಿದ್ದೇನೆ ಪಾಂಡವಪುರ ವಿಷಯದಲ್ಲಿ ದರ್ಶನ್ ನನ್ನ ಪರವಾಗಿ ನಿಂತಿದ್ರು. ಅವರಿಗೂ ಒಳ್ಳೆಯದಾಗಬೇಕು ಎಂಬುದು ನನ್ನ ಭಾವನೆ ಎಂದು ಶಾಸಕ ಸಿಎಸ್ ಪುಟ್ಟರಾಜು ವಿರುದ್ಧ ಹರಿಹಾಯ್ದಿದ್ದಾರೆ.ಕುಮಾರಸ್ವಾಮಿ ನನಗೆ ದುರಹಂಕಾರ ಎಂದಿದ್ರು ದುರಹಂಕಾರ ಪರಮಾವಧಿ ಅಂದ್ರೆ ಶ್ರೀರಂಗಪಟ್ಟಣದ ಶಾಸಕ ಸ್ಥಳೀಯ ಕಾರ್ಯಕರ್ತರೇ ಈ ಮಾತು ಹೇಳ್ತಿದ್ದಾರೆ. ಜೆಡಿಎಸ್‍ನಲ್ಲಿ ದುಡ್ಡು ಕೊಟ್ಟು ಟಿಕೆಟ್ ಪಡೆದಿದ್ದಾರೆ ಎಂದು ಅವರ ಶಾಸಕರೇ ಹೇಳಿದ್ದಾರೆ.
ತಮ್ಮ ಜೇಬಲ್ಲಿ ಕೆಂಡ ಇಟ್ಟುಕೊಂಡು ಬೇರೆಯವರ ಮನೆಗೆ ಬೆಂಕಿ ಹಾಕುವ ಕೆಲಸ ಮಾಡಬೇಡಿ ಎಂದು ಮಾಜಿ ಸಿಎಂ ಎಚ್?.ಡಿ.ಕುಮಾರಸ್ವಾಮಿ ಹೆಸರೇಳದೆ ಹರಿಹಾಯ್ದಿದ್ದಾರೆ. ಅಂಬರೀಶ್ ಅವರಿಂದ ಯಾವುದೇ ಉಪಯೋಗ ಆಗಿಲ್ಲ ಎಂದು ಹೆಚ್ಡಿಕೆ ಹೇಳಿದ್ರು ಕಳೆದ ಬಾರಿ 7ಕ್ಕೆ 7 ಜೆಡಿಎಸ್ ಗೆಲ್ಲಲು ಅಂಬರೀಶ್ ಕಾರಣ.ಕಾಂಗ್ರೆಸ್‍ನಲ್ಲಿ ಅಂಬರೀಶ್ ಅವರಿಗೆ ಆದ ಅಪಮಾನಕ್ಕೆ ಜನ ಜೆಡಿಎಸ್ ಕೈ ಹಿಡಿದ್ರು ಅದರಿಂದ ಕುಮಾರಸ್ವಾಮಿ ಸಿಎಂ ಆದರೂ. ಆದರೆ ಈಗ ಅಂಬರೀಶ್ ಅವರಿಂದ ಉಪಯೋಗ ಆಗಿಲ್ಲ ಅಂತಾರೆ. ಅಂದು ಗೆದ್ದ ದಿನ ಮನೆಗೆ ಬಂದು ಊಟ ಮಾಡಿ ಧನ್ಯವಾದ ಹೇಳಿದ್ರಿ ಇದನ್ನು ಸುಳ್ಳು ಅನ್ನೋದಾದರೆ ಓಪನ್ ಆಗಿ ಹೇಳಿ. ಅಂಬರೀಶ್ ಅವರಿಗೆ ಗೌರವ ಕೊಟ್ಟೆ ಅಂತೀರಲ್ಲಾ ಸಾವಿನ ವಿಷಯದಲ್ಲಿ ರಾಜಕೀಯ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಲಕ್ಷಾಂತರ ಅಭಿಮಾನಿಗಳು ಒತ್ತಾಯಿಸಿದ್ದಕ್ಕೆ ಅಂದು ಆ ಕೆಲಸ ಮಾಡಿದ್ರಿ ನಿಮ್ಮ ಕೆಲಸಗಳ ಬಗ್ಗೆ ಮಾತಾಡಿ ಸುಮಲತಾ ಅಂಬರೀಶ್ ಬಗ್ಗೆ ಮಾತನಾಡುವುದಲ್ಲ ಎಂದು ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಕಟ್ಟಿದ್ದು ಎಸ್‍ಡಿ ಜಯರಾಂ ಇವತ್ತು ಜಿಲ್ಲಾ ನಾಯಕರು ಎಂದು ಮೆರೆಯುತ್ತಿದ್ದಾರಲ್ಲ ಅವರನ್ನು ಬೆಳೆಸಿದ್ದು ಜಯರಾಂ. ಬರೀ ಮಾತಲ್ಲಿ ನನ್ನ ಮಗ ಬೇರೆ ಅಲ್ಲ, ಅಶೋಕ್ ಬೇರೆ ಅಲ್ಲ ಎಂದು ಹೇಳುವುದಲ್ಲ. ನಿಖಿಲ್ ಸೋತ ಕೂಡಲೇ ಯುವ ರಾಜ್ಯಧ್ಯಕ್ಷನನ್ನಾಗಿ ಮಾಡಿದ್ರಿ ಯಾಕೆ ನಿಮ್ಮ ಮನೆಯವರನ್ನ ಬಿಟ್ಟು ಬೇರೆ ಮನೆ ಮಕ್ಕಳನ್ನ ಬೆಳೆಸಲ್ಲ.
ರಾಜ್ಯಾಧ್ಯಕ್ಷರಾದ ಬಳಿಕ ನಿಖಿಲ್ ಎಷ್ಟು ಸಭೆ ಮಾಡಿದ್ದಾರೆ ಈಗ ರಾಮನಗರ ಟಿಕೆಟ್ ಕೊಟ್ಟಿದ್ದಾರೆ ಇದೆಲ್ಲವೂ ಜನರಿಗೆ ಅರ್ಥವಾಗಿದೆ, ಅವರೇ ತಕ್ಕ ಪಾಠ ಕಲಿಸುತ್ತಾರೆ. ಮಂಡ್ಯದಲ್ಲಿ ಈ ಬಾರಿ 4-5 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
2019ರಲ್ಲಿ ಶಿವರಾಮೇಗೌಡರು ನನ್ನ ವಿರುದ್ಧ ಮಾತನಾಡಿದ್ದರು. ಮೂರು ವರ್ಷಗಳ ಹಿಂದೆಯೇ ತಪ್ಪಾಗಿದೆ ನನ್ನಿಂದ ಅನಿವಾರ್ಯವಾಗಿ ಮಾತನಾಡಿಸಿದರು ಎಂದು ಕ್ಷಮೆ ಕೇಳಿದ್ದಾರೆ