ಬ್ಯಾಡಗಿ ತಾಲೂಕಿನ ಪ್ರಭಾರಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ರವಿಕುಮಾರ ಕೊರವರ ಅವರು ಗ್ರೇಡ್-1 ತಹಶೀಲ್ದಾರರಾಗಿ ಪದೋನ್ನತಿ ಹೊಂದಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎನ್.ಎಂ.ಕಂಬಳಿ, ಚುನಾವಣಾ ಶಿರಸ್ತೇದಾರ ಆರ್.ಎಂ.ಮುಗುಳಿ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಎನ್. ಹುಚ್ಚೇರ, ಜಗದೀಶ ಮಣ್ಣಮ್ಮನವರ, ಗುರುರಾಜ ಚಂದ್ರಿಕೇರ, ಎಸ್.ಯು.ಮಾಸ್ತಿ, ಹನುಮಂತಪ್ಪ ಬಾರ್ಕೆರ, ಸಿ.ಟಿ.ಸಂಗಣ್ಣನವರ, ಶಬ್ಬೀರ ಬಾಗೇವಾಡಿ, ಎಂ.ಎಫ್.ಕರಿಯಣ್ಣನವರ, ಕರಬಸಪ್ಪ ಬ್ಯಾಡಗಿ, ಬಿ.ಎನ್.ಖವಾಸ, ಮೈನುದ್ದೀನ್ ಕಳಗೊಂಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.