ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿ ಹೊಳಿ ಅವರ ಪರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ರಾಮದುರ್ಗ ಬಳಿಯ ಹೊಸಕೊಟ್ಟಿಗೆಯಲ್ಲಿ ಪ್ರಚಾರ ನಡೆಸಿದರು. ಪಕ್ಷದ ಮುಖಂಡರುಗಳಾದ ಎಸ್. ಮನೋಹರ್, ಎಂ.ಎ. ಸಲೀಂ, ಸೋಮಶೇಖರ್, ಪುಟ್ಟರಾಜು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.