ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಎನ್.ಎಸ್. ಎಸ್ ಘಟಕ ಹಾಗೂ ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ಜನ್ಮ ದಿನಾಚರಣೆಯನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಎಂ.ಕೆ.ಹಿರೇಗೌಡ್ರ, ಅಶ್ವಿನಿ ಕಟಗೇರಿ, ಬಿ.ಡಿ. ಶಿಂತ್ರಿ, ಸುವರ್ಣ ಈಟಿ, ಬಿ.ಎಂ. ಚಿಕ್ಕನರಗುಂದ, ಬಿ.ಎಂ. ಕ್ಷೀರಸಾಗರ, ಆರ್. ಎನ್. ಬ್ಯಾಗವಾದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.