ಹುಬ್ಬಳ್ಳಿ ದೇಶಪಾಂಡೆನಗರದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷದ ಧ್ವಜಾರೋಹನ ಮಾಡಲಾಯಿತು. ಈ ಸಂಧರ್ಭದಲ್ಲಿ ಧಾರವಾಡ ವಿಭಾಗ ಪ್ರಭಾರಿಗಳಾದ ಲಿಂಗರಾಜ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಕಾರ್ಯಾಲಯ ಕಾರ್ಯದರ್ಶಿ ಮುರಗೇಶ ಹೊರಡಿ, ಶಂಕರ ಪಾಟೀಲ, ಪ್ರಶಾಂತ ಹಾವಣಗಿ, ಸುನೀಲ ಮಿಸ್ಕಿನ್, ವೀರಣ್ಣ ಕಾಶಪ್ಪನವರ, ನಿಂಗರಾಜ ಎಚ್. ಮುಂದಿನಮನಿ, ಗುರು ದೊಡ್ಡಮನಿ, ಮಾದೇವಪ್ಪ ಯಳವತ್ತಿ, ಮಂಜುನಾಥ ಕಳ್ಳಿಮನಿ ಮೊದಲಾದವರು ಉಪಸ್ಥಿತರಿದ್ದರು.