ಕಲಬುರಗಿ,ಜು.6-ನಗರದ ಕೋಟನೂರ (ಡಿ) ಗ್ರಾಮದ ಕೊಳಗೇರಿ ಅಭಿವೃದ್ಧಿ ಮಂಡಳಿ ಪಕ್ಕದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 6,16,000 ರೂ.ಮೌಲ್ಯದ ಮರಳನ್ನು ಜಪ್ತಿ ಮಾಡಲಾಗಿದೆ.
ಅಕ್ರಮವಾಗಿ ಮರಳು ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸತ್ಯಭಾಮ, ತಹಶೀಲ್ದಾರ ಮದುರಾಜ, ಕಂದಾಯ ನಿರೀಕ್ಷಕ ಖಾಜಾ ಪಾಶಾ, ಗ್ರಾಮ ಆಡಳಿತಾಧಿಕಾರಿ ರಾಜ್ ಅಹ್ಮದ್, ವಿಶ್ವಿದ್ಯಾಲಯ ಪೊಲೀಸ್ ಠಾಣೆ ಪಿ.ಐ.ಅರುಣ್ ಎಸ್.ಮರಗುಂಡಿ ಅವರು ದಾಳಿ ನಡೆಸಿ 6.16 ಲಕ್ಷ ರೂ.ಮೌಲ್ಯದ 200 ಮೆಟ್ರಿನ್ ಟನ್ ಮರಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.