200 ಕೋಟಿ ಅನುದಾನ ತರುವಲ್ಲಿ ಯಶಸ್ಸು :ಶಾಸಕ ದೊಡ್ಡಗೌಡರ


ಚನ್ನಮ್ಮನಕಿತ್ತೂರ,ಎ.4:ಪ್ರಾಧಿಕಾರಕ್ಕೆರಾಜ್ಯ ಸರ್ಕಾರದಿಂದ 200 ಕೋಟಿಅನುದಾನತರುವಲ್ಲಿ ಶ್ರಮಿಸಿದ ಶಾಸಕ ಮಹಾಂತೇಶದೊಡ್ಡಗೌಡ್ರ ಅವರಿಗೆ ರಾಜಗುರು ಸಂಸ್ಥಾನ ಕಲ್ಮಠ ಹಾಗೂ ರಾಣಿಚನ್ನಮ್ಮನ ವೈದ್ಯರ ಸಂಘ, ಬಿಜೆಪಿ ಮಂಡಳ ವತಿಯಿಂದ ಕಲ್ಮಠದ ಆವರಣದಲ್ಲಿ ಗೌರವ ಅಭಿನಂದನೆ ಕಾರ್ಯಕ್ರಮ ಜರುಗಿತು. ಸನ್ಮಾನ್ಯ ಸ್ವೀಕರಿಸಿ ಸಸಿಗೆ ನೀರುನಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ ಕೋವಿಡ್-19, ಅತಿವೃಷ್ಠಿ ಆನಾವೃಷ್ಠಿ, ಸಂಕಟಅನುಭವಿಸುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಕಿತ್ತೂರಿನ ಮೇಲೆ ಅಭಿಮಾನವಿಟ್ಟು 200 ಕೋಟಿರೂ ಮಂಜೂರು ಮಾಡಿದ್ದುಕಿತ್ತೂರು ಜನತೆ ಸಂತಸತಂದಿದೆ.ಅದರಲ್ಲಿತಕ್ಷಣ 50 ಕೋಟಿ ಬಿಡುಗಡೆ ಮಾಡಿದ್ದಾರೆ.ಸ್ವಚ್ಛವಾದ ಮನಸ್ಸಿದ್ದರೇ ಸುಚಿಯಾದ ಮನಸ್ಸು ಕೊಟ್ಟೆಕೊಡುತ್ತದೆ. ಎನ್ನುವುದಕ್ಕೆ ಇದೊಂದೇ ಸಾಕ್ಷಿ.ರಾಜಕಾರಣ ಚುನಾವಣೆ ಬಂದಾಗ ಚುನಾವಣೆಮಾಡಿ ನಂತರ ಮರೆತು ನಾವೆಲ್ಲರೂ ಒಂದೇ ಎಂದು ತಿಳಿದು ಜನ ಸಾಮಾನ್ಯರ ಮನಸ್ಸುಗೆದ್ದು ಕೆಲಸ ಮಾಡಬೇಕು. ಅಂದಾಗ ಮಾತ್ರ ಆ ವ್ಯಕ್ತಿ ರಾಜಕಾರಣಿ.ಅಂದಾಗ ಮಾತ್ರ ಅವರ ಕನಸು-ನನಸಾಗಲಿಕ್ಕೆ ಸಾಧ್ಯವೆಂದರು.
ಸಾನಿಧ್ಯ ವಹಿಸಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾ ಸ್ವಾಮಿಜಿ.ಶಾಸಕ ಮಹಾಂತೇಶ ದೊಡ್ಡಗೌಡರಕಿತ್ತೂರ ಅಭಿವೃದ್ಧಿಗಾಗಿ ಅವರು ಸಮಯ ನೋಡದೇಹಗಲಿರುಳು ಕೆಲಸ ಮಾಡುತಿದ್ದಾರೆ. ಶಾಸಕರಲ್ಲಿ ವಿನಂತಿ ಏನೆಂದರೆ ಕಿತ್ತೂರಿನಚನ್ನಮ್ಮಾಜೀ ಕೋಟೆ ಕಟ್ಟುವುದು, ಮತಕ್ಷೇತ್ರಕ್ಕೆ ನೂರು ಬೆಡ್ಡಿನ ತಾಲೂಕಾ ಆಸ್ಪತ್ರೆ, ಬಸ್ಸಘಟಕ, ನಿರಂತರ ಕಿತ್ತೂರ, ಎಂ.ಕೆ.ಪಟ್ಟಣಕ್ಕೆ2 4×7 ಕುಡಿಯುವ ನೀರಿನ ಯೋಜನೆ, ಅಗ್ನಿಶಾಮಕ ಠಾಣೆ, ರಸ್ತೆ ಸುಧಾರಣೆ, ಮತ್ತುನೇಸರಗಿ ಭಾಗದಲ್ಲಿ1200 ರಿಂದ 1500 ಕೋಟಿರೂ. ನೀರಾವರಿ ಯೋಜನೆ, ಇನ್ನೂ ಹಲವಾರು ಯೋಜನೆ ಜನರ ಕನಸನ್ನು ನನಸಾಗುವಂತೆ ಮಾಡುವುದೇ ಅವರ ಸತತ ಪ್ರಯತ್ನಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಂಎಫ್ ಅಧ್ಯಕ್ಷಡಾ|| ಬಸವರಾಜ ಪರವಣ್ಣವರ, ಬೀದರಿನ ಶ್ರೀ ಪ್ರಣವಾನಂದ ಸ್ವಾಮಿಜೀ, ವಿಶ್ವನಾಥ ಬಿಕ್ಕಣ್ಣವರ, ಜಗದೀಶ ವಸ್ತ್ರದ, ಸಂದೀಪ ದೇಶಪಾಂಡೆ ಮತ್ತುವಿವಿಧ ಮಠಾಧೀಶರು.
ಶಾಸಕ ಮಹಾಂತೇಶದೊಡ್ಡಗೌಡ್ರ ಹಾಗೂ ಧರ್ಮಪತ್ನಿಯನ್ನು ಸ್ವಾಮಿಜೀಗಳು, ನಾಗರಿಕರು, ಮಂಡಳದ ಬಿಜೆಪಿ ಕಾರ್ಯಕರ್ತರು, ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯ, ಗಣ್ಯರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಹನಮಂತ ಲಗೋಟಿ, ಕಿರಣ ವಾಳದ, ಡಾ|| ವಿ.ಡಿ. ಉಣಕಲಕರ, ಸೇರಿದಂತೆ ಮಠಾಧೀಶರು, ಗಣ್ಯರು, ಮತ್ತಿತರರುಉಪಸ್ಥಿತರಿದ್ದರು.ಸ್ವಾಗತಚಿನ್ನಪ್ಪಣ್ಣಾ ಮುತ್ನಾಳ. ನಿರೂಪಣೆ ಮತ್ತು ವಂದನಾರ್ಪಣೆ ಶಿವಾನಂದ ಹನಮಸಾಗರ ವೆರವೇರಿಸಿದರು.