20 ಸಾವಿರ ಮತಗಳ ಅಂತರದಿಂದ ಶರಣು ಸಲಗಾರ ಗೆಲುವು: ಕಟಿಲ್ ವಿಶ್ವಾಸ

ಬೀದರ.ಏ.03: ಬಸವಕಲ್ಯಾಣ ವಿಧಾನ ಸಭೆ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಶರಣು ಸಲಗಾರ ಸುಮಾರು 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ ಕಟಿಲ್ ತಿಳಿಸಿದ್ದಾರೆ.

ಜಿಲ್ಲೆಯ ಬಸವಕಲ್ಯಾಣ ನಗರದಶಾಂತಿನಿಕೇತನನಗರದಶಾಂತಿನಿಕೇತನ ಕಾಲೇಜು ಅವರಣದಲ್ಲಿ ಭಾರತೀಯ ಜನತಾ ಪಕ್ಷದ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಮನೆಗೆ ಬೆಂಕಿ ಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದು ಹಾಗೂ ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬೆಂಗಳೂರು ಶಾಸಕ ಅಖಂಡ ಶ್ರಿನಿವಾಸಮೂರ್ತಿ ರಕ್ಷಣೆ ಕೊಡಲು ಇವರಿಂದ ಸಾಧ್ಯವಾಗಲಿಲ್ಲ. ಬಸವಕಲ್ಯಾಣದಲ್ಲಿ ಓರ್ವ ಹಿರಿಯ ದಲಿತ ಮುಖಂಡ ರವಿಂದ್ರ ಗಾಯಕವಾಡ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದ್ದು, ಅವರು ಮನನೊಂದು ಇಂದು ಭಾರತೀಯ ಜನತಾ ಪಕ್ಷಕ್ಕೆ ಸೆರ್ಪಡೆಯಾಗಿರುವುದು ಸ್ವಾಗತಾರ್ಹ ಕ್ರಮ ಎಂದು ತಿಳಿಸಿದರು.

ಬಸವಕಲ್ಯಾಣ ಅಣ್ಣ ಬಸವಣ್ಣವರ ಕರ್ಮಭೂಮಿ. ಇಲ್ಲಿ ಎಲ್ಲ ಜಾತಿ ಜನಾಂಗದವರು ವಾಸಿಸುತ್ತಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ, ಅಂಬೇಡ್ಕರ್ ಅವರ ಜನನ ಹಾಗೂ ಅವರ ಅಂತ್ಯ ಸಂಸ್ಕಾರ ಜರುಗಿದ ಪ್ರದೇಶಗಳು ಸೇರಿ ಐದು ತೀರ್ಥಕ್ಷೇಯ್ರಗಳೆಂದು ಗುರಿತಿಸಿ ಅವರ ನಾಗಪುರ ಮನೆ, ಮುಂಬೈನಲ್ಲಿರುವ ಸಮಾಧಿಎಲ್ಲವೂ ಸೇರಿ ಪಂಚ ತೀರ್ಥಕ್ಷೇತ್ರಗಳೆಂದು ಬಿಜೆಪಿ ಘೋಸಿಸಿದ್ದು, ಅಂಬೇಡ್ಕರ್ ಅವರ ಮೂರ್ತಿ ಮತ್ತು ಬಸವೇಶ್ವರರ ಮೂರ್ತಿ ಇಂಗ್ಲೆಂಡ್‍ನಲ್ಲಿ ಸ್ಥಾಪಿಸಿರುವ ಹೆಗ್ಗಳಿಕೆ, ಮುಸಲ್ಮಾನರಿಗೆ ಹಜ್ ಭವನ ನಿರ್ಮಾಣ, ಅವರಿಗೆ ಹಜ್ ಯಾತ್ರೆಗೆ ತೆರಳಲು ಹೆಚ್ಚಿನ ಅವಕಾಶ ಇವೆಲ್ಲವೂ ಭಾರತೀಯ ಜನತಾ ಪಕ್ಷದ ಸಾಧನೆಗಳಿದ್ದು ಶರಣು ಸಲಗಾರ ಎಲ್ಲರ ಕಂದ. ಅವರ ಕೈ ಹಿಡಿದು ಬಸವಕಲ್ಯಾಣ ಅಭಿವೃದ್ಧಿ ಮಾಡಲು ಅವರಿಗೆ ಇಲ್ಲಿಯ ಜನತೆ ಆಶಿರ್ವಾದ ನೀಡುವಂತೆ ಮನವಿ ಮಾಡಿದರು.

ರಾಜ್ಯದ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಮಾಜಿ ಸಚಿವ ಬಾಬಾರಾವ ಚಿಂಚನಸೂರ್, ಸಂಸದ ಭಗವಂತ ಖೂಬಾ, ಪಕ್ಷಕ್ಕೆ ನೂತನವಾಗಿ ಸೆರ್ಪಡೆಯಾದ ರವಿಂದ್ರ ಗಾಯಕವಾಡ, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ತಾಲೂಕಾಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣ ಗೋಣೆ, ಹಿರಿಯ ಮುಖಂಡ ರಾಜಣ್ಣ ಸಿರಗಾಪೂರ, ಪಕ್ಷದ ಅಭ್ಯರ್ಥಿ ಶರಣು ಸಲಗಾರ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅನಿಲ್ ಭುಸಾರೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.