20 ಸಾವಿರ ಕೋಟಿ ಮೌಲ್ಯದ ಎಥೆನಾಲ್ ಖರೀದಿ

ನವದೆಹಲಿ, ಜೂ.೫- ಹವಾಮಾನ ನ್ಯಾಯದ ವಿಷಯದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ೨೦೨೫ರ ವೇಳೆಗೆ ಪೆಟ್ರೋಲ್ ಜೊತೆ ಶೇಕಡ ೨೦ರಷ್ಟು ಎಥೆನಾಲ್ ಮಿಶ್ರಣ ಮಾಡಿ ಬಳಕೆ ಮಾಡುವ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಭಾರತೀಯ ತೈಲ ಕಂಪನಿಗಳು ೨೦ ಸಾವಿರಕೋಟಿ ರೂಪಾಯಿ ಮೊತ್ತದ ಎಥೆನಾಲ್ ಅನ್ನು ಕಬ್ಬು ಬೆಳೆಗಾರರಿಂದ ಖರೀದಿಸಲು ಮುಂದಾಗಿವೆ ಎಂದು ಅವರು ತಿಳಿಸಿದ್ದಾರೆ.
ವಿಶ್ವ ಪರಿಸರ ದಿನಾಚರಣೆಯಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು ಪೆಟ್ರೋಲ್ ಡೀಸೆಲ್‌ಗೆ ಪರ್ಯಾಯವಾಗಿ ಮತ್ತು ಅದರ ಜೊತೆಗೆ ಎಥೆನಾಲ್ ಮಿಶ್ರಣಮಾಡಿ ಬಳಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಏಳೆಂಟು ವರ್ಷಗಳ ಹಿಂದೆ ಎಥೆನಾಲ್ ಬಳಕೆ ಬಗ್ಗೆ ಹೆಚ್ಚು ಮಾತನಾಡುತ್ತಿರಲಿಲ್ಲ ಹಾಗಾಗಿ ಇದರ ಬಳಕೆ ಬಂದಿರಲಿಲ್ಲ ಇದೀಗ ೨೦೨೦ ರಿಂದ ೨೫ರವರೆಗೆ ನೀಲಿನಕ್ಷೆ ರೂಪಿಸಲಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಎಥನಾಲ್ ಬಳಕೆ ಹೆಚ್ಚು ಹೆಚ್ಚು ಬಳಕೆಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಹವಾಮಾನ ಬದಲಾವಣೆ ಮತ್ತು ಅದರ ಹವಾಮಾನ ಕುರಿತ ಅನ್ಯಾಯ ವಿಷಯದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಹೆಚ್ಚುತ್ತಿರುವ ಇಂಗಾಲದ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
೫೦ ವಿಮಾನದಲ್ಲಿ ಸೌರಶಕ್ತಿ ಅಳವಡಿಕೆ:
ದೇಶದ ೫೦ಕ್ಕೂ ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣವಾಗಿ ಸೌರಶಕ್ತಿ ಅಳವಡಿಕೆ ಮಾಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದರಿಂದಾಗಿ ದೇಶದ ನಿಲ್ದಾಣಗಳಲ್ಲಿ ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಾಗಿದೆ ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚು ಹೆಚ್ಚು ಅಳವಡಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ:
ಆರ್ಥಿಕತೆ ಮತ್ತು ಪರಿಸರ ಸಮಾನವಾಗಿ ಸಾಗಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾರತ ಅಂತರಾಷ್ಟ್ರೀಯ ಸೌರಶಕ್ತಿ ಮಿತ್ರಕೂಟದ ದೇಶಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸೌರಶಕ್ತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಇದರಿಂದ ಪರಿಸರ ಸಂರಕ್ಷಣೆಯಲ್ಲಿ ದೇಶದ ಆರ್ಥಿಕತೆ ಚೇತರಿಕೆಗೆ ಆದ್ಯತೆ ನೀಡುವುದಾಗಿ ಅವರು ಹೇಳಿದರು
ಐದು ವರ್ಷಗಳ ಸಂಪೂರ್ಣ ನೀಲನಕ್ಷೆ ರಚನೆ ಮಾಡುವುದರಿಂದ ದೇಶದಲ್ಲಿ ಎಥನಾಲ್ ಬಳಕೆಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಇದರಿಂದ ಕಬ್ಬು ಬೆಳೆಗಾರರು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಪ್ರಾಯೋಗಿಕ ಚಾಲನೆ
ದೇಶದಲ್ಲಿ ಎಥೆನಾಲ್ ಆಧಾರಿತ ಇ- ೧೦೦ ಯೋಜನೆ ಪ್ರೋತ್ಸಾಹಿಸುವ ಪ್ರಾಯೋಗಿಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.
ವಿಶ್ವದ ಅತಿ ದೊಡ್ಡ ಪ್ರತಿಮೆ ಎನ್ನುವ ಹೆಗ್ಗಳಿಕೆಗಡ ಪಾತ್ರವಾಗಿರುವ ಗುಜರಾತಿನ ವಡೋದರ ನರ್ಮದಾ ನದಿ ತಟದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಬಳಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಾಕ್ಸ್

ಬಾಕ್ಸ್
೨೫೦ ರಷ್ಟು ಹೆಚ್ಚಳ:

ದೇಶದಲ್ಲಿ ಕಳೆದ ೬- ೭ ವರ್ಷಗಳ ಅವಧಿಯಲ್ಲಿ ನವೀಕರಿಸಬಹುದಾದ ಇಂಧನ ಪ್ರಮಾಣ ಶೇಕಡಾ ೨೫೦ ರಷ್ಟು ಹೆಚ್ಚಳವಾಗಿದೆ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಜೊತೆಗೆ ಇದೇ ಅವಧಿಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಶೇಕಡ ೧೫ ಪಟ್ಟು ಹೆಚ್ಚಾಗಿದೆ ಇದರಿಂದಾಗಿ ನವೀಕರಿಸಬಹುದಾದ ಇಂಧನ ಬಳಸುವ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ.