20 ಲೀ. ಕಲಬೆರಿಕೆ ಸೇಂದಿ ಜಪ್ತಿ

ಯಾದಗಿರಿ : ಮೇ 02 : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ, 2024ರ ಮಾರ್ಚ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.

 ಪ್ರಕರಣ ಸಂ.01, 2024ರ ಏಪ್ರಿಲ್ 30 ರಂದು ಸಂಜೆ 4 ಗಂಟೆಗೆ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಕಲಬುರಗಿ ವಿಭಾಗ, ಕಲಬುರಗಿ ಹಾಗೂ ಅಬಕಾರಿ ಉಪ ಆಯುಕ್ತರು, ಯಾದಗಿರಿ ಅವರು ನಿರ್ದೇಶನದ ಮೇರೆಗೆ ಶ್ರೀ ಆನಂದ ಉಕ್ಕಲಿ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಶಹಾಪೂರ ಅವರು ಮಾರ್ಗದರ್ಶನದಲ್ಲಿ ಖಚಿತ ಭಾತ್ಮಿಯ ಮೇರೆಗೆ ಶ್ರೀ ಸಿದ್ರಾಮಪ್ಪ ತಾಳಿಕೋಟಿ ಅಬಕಾರಿ ನಿರೀಕ್ಷಕರು, ಶ್ರೀ ಅಶೋಕ ರಾಠೋಡ ಅಬಕಾರಿ ಉಪ ನಿರೀಕ್ಷಕರು, ಯಾದಗಿರಿ ವಲಯ, ಅಬಕಾರಿ ಮುಖ್ಯ ಪೇದೆಗಳಾದ ಶ್ರೀ ಮಹ್ಮದ ರಫೀ, ಶ್ರೀ ಜಂಬುನಾಥ ಪೂಜಾರಿ, ಶ್ರೀ ಶರೀಫ ವಾಲೆಕಾರ, ಅಬಕಾರಿ ಪೇದೆಗಳಾದ ಶ್ರೀ ಶಿವಶರಣ, ಶ್ರೀ ಶೇಖರ ಮೋಹನ ಮತ್ತು ವಾಹನ ಚಾಲಕರಾದ ಶ್ರೀ ಶಂಕರ ಮೇಧಾ, ಗೃಹ ರಕ್ಷಕದಳ ಸಿಬ್ಬಂದಿಯಾದ ಶ್ರೀ ಅರ್ಜುನ, ಶ್ರೀ ಭೀಮಾಶಂಕರ ಮತ್ತು ಶ್ರೀ ಅನಿಲ್ ಸಿಬ್ಬಂದಿಯವರೊAದಿಗೆ ಕೂಡಿಕೊಂಡು ಯಾದಗಿರಿ ಹಾಗೂ ಗುರುಮಠಕಲ್ ಮಾರ್ಗಮದ್ಯದ ಗುಂಜನೂರು ಕ್ರಾಸ್ ಬಳಿ ಗಸ್ತು ಮಾಡುತ್ತಿರುವಾಗ ದೊರೆತ ಖಚಿತ ಭಾತ್ಮಿಯ ಮೇರೆಗೆ ಗುರುಮಠಕಲ್ ತಾಲೂಕಿನ ಮಿನಾಸಪುರ ಗ್ರಾಮದ ಮೊಗಲಪ್ಪ ತಂದೆ ಬುಗ್ಗಪ್ಪ ಎಂಬಾತನ ಮನೆಯ ಮೇಲೆ ಅಬಕಾರಿ ದಾಳಿ ಮಾಡಿದಾಗ ಅಕ್ರಮವಾಗಿ ಮಾರಾಟದ ಉದ್ದೇಶಕ್ಕಾಗಿ ತಯಾರಿಸಿ ಸಂಗ್ರಹಿಸಿಟ್ಟ 15 ಲೀ. ಸಾಮರ್ಥ್ಯದ ಸ್ಟೀಲ್ ಕೊಡದಲ್ಲಿ  15 ಲೀ. ಕಲಬೆರಿಕೆ ಸೇಂದಿ ಹಾಗೂ 05 ಲೀ. ಸಾಮರ್ಥ್ಯದ ಬಿಳಿ ಬಣ್ಣದ ಬಕೇಟನಲ್ಲಿ 05 ಲೀ. ಕಲಬೆರಿಕೆ ಸೇಂದಿ ಒಟ್ಟು 20 ಲೀ. ಕಲಬೆರಿಕೆ ಸೇಂದಿಯನ್ನು ಜಪ್ತುಪಡಿಸಿಕೊಳ್ಳಲಾಯಿತು. ಇದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 13, 14 ಮತ್ತು 15, ಪ್ರಕಾರ, ಉಲ್ಲಂಘನೆಯಾಗಿದ್ದು ಹಾಗೂ ಇದೆ ಕಾಯ್ದೆಯ ಕಲಂ 32(1) ಮತ್ತು 38 (ಎ) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಮುದ್ದೆಮಾಲನ್ನು ಪಂಚನಾಮೆಯಡಿ ಜಪ್ತಿಪಡಿಸಿ, ಇಲಾಖಾ ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.