20 ರಂದು ವಿಜಯಪುರದಲ್ಲಿ ಜನಾ ಸ್ವರಾಜ್ಯ ಸಮಾವೇಶ

ವಿಜಯಪುರ, ನ.13-ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆ ವತಿಯಿಂದ ಜನಾ ಸ್ವರಾಜ ಸಮಾವೇಶದ ಪೂರ್ವ ಭಾವಿ ಸಭೆಯನ್ನು ನಗರದ ಸಾಯಿವಿಹಾರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ಚುನಾವಣೆ ನಡೆಯಲಿದ್ದು ಪಕ್ಷದ ಬಲವರ್ಧನೆಗೆ ಜನ ಸ್ವರಾಜ್ಯ ಸಮಾವೇಶ ನಡೆಯಲಿದೆ. ರಾಜ್ಯದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 18 ರಿಂದ ಪ್ರತಿ ಜಿಲ್ಲೆಯಲ್ಲಿ ಜನ ಸ್ವರಾಜ್ಯ ಸಮಾವೇಶ ನಡೆಸಲಾಗುವುದು. ವಿಧಾನ ಪರಿಷತ್ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು ಈ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟುಗಳನ್ನು ಬಿಜೆಪಿ ಗೆಲ್ಲಲು ನವೆಂಬರ್ 18 ರಿಂದ 23 ರವರೆಗೆ ಈ ಜನ ಸ್ವರಾಜ್ಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರು, ದಿನಾಂಕ : 20-11-2021 ರಂದು ಮಧ್ಯಾಹ್ನ 3 ಗಂಟೆಗೆ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಜನಾ ಸ್ವರಾಜ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈಗ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಮಂಡಲದ ಎಲ್ಲ ಅಧ್ಯಕ್ಷರುಗಳು , ಜಿಲ್ಲೆಯ ಪದಾಧಿಕಾರಿಗಳು ಈ ಚುನಾವಣೆಯಲ್ಲಿ ಕೂಡಾ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಗೆಲವು ಸಾಧಿಸಬೇಕಾಗಿದೆ. ಯಾರು ಅಭ್ಯರ್ಥಿ ಆಗುತ್ತಾರೆ ಎನ್ನುವುದು ಮುಖ್ಯವಲ್ಲ. ನಾನೇ ಅಭ್ಯರ್ಥಿ ಎಂದು ತಿಳಿದುಕೊಂಡು ಕೆಲಸ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ. ನಮ್ಮ ರಾಜ್ಯ ನಾಯಕರ, ಸಲಹೆ, ಮಾರ್ಗದರ್ಶನ ಕೊಡ್ತಾರೆ ನಾವೆಲ್ಲರೂ ಕೂಡಿಕೊಂಡು ಸಕ್ರೀಯರಾಗಿ ತೊಡಗೋಣ ಎಂದು ಹೇಳಿದರು.
ಈ ಯಾತ್ರೆಗೆ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ರಾಜ್ಯ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ಸಚಿವರಾದ ಶ್ರೀರಾಮಲು , ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ, ಜಿಲ್ಲೆಯ ಸಂಸದರಾದ ರಮೇಶ ಜಿಗಣಗಿ, ಜಿಲ್ಲೆಯ ಎಲ್ಲ ಶಾಸಕರು ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ಅದನ್ನು ಎಲ್ಲರೂ ಕೂಡಿಕೊಂಡು ಕಾರ್ಯಕ್ರಮ ಯಶಸಿಗೊಳಿಸಬೇಕು ಎಂದು ಹೇಳಿದರು.
ಅದರಂತೆ ಸಿಂದಗಿಯಲ್ಲಿ ಸುಮಾರು 60 ಜನರ ತಂಡಗಳು ಭೂತ ಮಟ್ಟದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಯಾರು ಏನೂ ನಿರೀಕ್ಷೆ ಮಾಡದೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಸಿಂದಗಿ ಉಪ ಚುನಾವuಯಲ್ಲಿ 30 ಸಾವಿರ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿ ಯಶಸ್ವಿಯಾಗಿದ್ದೇವೆ. ಪಕ್ಷದ ಎಲ್ಲ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಅಭಿನಂದನೆಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಎನ್.ರಮೇಶ ಜೀ ಮಾತನಾಡಿದರು.
ವೇದಿಕೆ ಮೇಲೆ ಬೆಳಗಾವಿ ವಿಭಾಗದ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ, ಬೆಳಗಾವ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಅಕ್ಕಲಕೋಟ, ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕರಾದ ಸೋಮನೌಡ ಪಾಟೀಲ (ಸಾಸನೂರ), ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ, ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿವೇಕಾನಂದ ಡಬ್ಬಿ, ಜಿಲ್ಲೆ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಜೋಗುರ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ದಯಾಸಾಗರ ಪಾಟೀಲ,ಗೂಳಪ್ಪ ಶೆಟಗಾರ, ಮಲ್ಲಮ್ಮ ಜೋಗುರ, ಭೀಮಾಶಂಕರ ಹದನೂರ, ಪ್ರಭುಗೌಡ ದೇಸಾಯಿ, ಗುರಲಿಂಗಪ್ಪ ಅಂಗಡಿ, ವಿಜಯ ಜೋಶಿ, ಗೋಪಾಲ ಘಟಕಾಂಬಳೆ, ಶಿಲ್ಪಾ ಕುದರಗೊಂಡ, ಬಸು ಹೂಗಾರ, ಮಳುಗೌಡ ಪಾಟೀಲ, ಈಶ್ವರ ಶಿವೂರ, ವಿಠ್ಠಲ ಕಿರಸೂರ, ಮಲ್ಲಿಕಾರ್ಜುನ ಕಿವುಡೆ, ಪರಶುರಾಮ ಪವಾರ, ರಾಮು ಅವಟಿ, ಶಂಕರಗೌಡ ಪಾಟೀಲ, ಬಸವರಾಜ ಬೈಚಬಾಳ, ಕೃಷ್ಣಾ ಗುನ್ಹಾಳಕರ, ಶರಣ ಬಸು ಕುಂಬಾರ, ಪಿಂಟು ಕುಂಬಾರ, ರಾಜಕುಮಾರ ಸಗಾಯಿ, ರಮೇಶ ಮಸಬಿನಾಳ, ಸುರೇಶ ಬಿರಾದಾರ, ಗೀತಾ ಕುಗನೂರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.