
ಕಲಬುರಗಿ,ಎ,18: ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಮಹಾತ್ಮ ಬಸವೇಶ್ವರರ ಜಯಂತಿ ನಿಮಿತ್ಯ ನಾವದಗಿ (ಬಿ) ಗ್ರಾಮದ ಬಳಿಯ ಸಾಂಸ್ಕøತಿಕ ಲೋಕ ದೇಶಿ ಕೇಂದ್ರಿಯ ಶಾಲೆಯಲ್ಲಿ ದಿನಾಂಕ 20.04.2023 ರಂದು ಬೆಳಗ್ಗೆ 10 ಗಂಟೆಗೆ
ಬಸವ ದರ್ಶನ ವಚನದಲ್ಲಿನ ಬೆಳಕು – ನಮ್ಮೊಳಗಿನ ಕತ್ತಲು,ವಿಶೇಷ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸತ್ಕಾರ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದ್ದಾರೆ.
ಶ್ರೀನಿವಾಸ ಸರಡಗಿ ಶ್ರೀ
ರೇವಣಸಿದ್ದ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದು,ದೇಶಿ ಕೇಂದ್ರಿಯ ಶಾಲೆಯ ಅಧ್ಯಕ್ಷರಾದ ಡಾ.ರಾಜೇಂದ್ರ ಯರನಾಳೆ ಅಧ್ಯಕ್ಷತೆ ,ಕಮಲಾಪುರ ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ ಆಶಯ ನುಡಿಗಳನ್ನು ಆಡಲಿದ್ದಾರೆ.ಕಲಬುರಗಿ ಶರಣ ಸಾಹಿತಿ
ಸಂತೋಷ ಹೂಗಾರ ವಿಶೇಷ ಉಪನ್ಯಾಸ ನೀಡಲಿದ್ದು,ಕಮಲಾಪುರ ಬಸವ ಜಯಂತೋತ್ಸವ ಸಮಿತಿಯ ಅಧಯಕ್ಷರಾದ ಗುರುರಾಜ ಮಾಟೂರ, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ
ಪರಮೇಶ್ವರ ಓಕಳಿ ಕಮಲಾಪುರ ವಿಜಯ ಕರ್ನಾಟಕ ವರದಿಗಾರ ಮಲ್ಲಿಕಾರ್ಜುನ ಮೂಲಗೆ ವಿಶೇಷ ಸನ್ಮಾನಿತರು ; ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶ್ರೀ ಗುರುಲಿಂಗಪ್ಪ ತಡಕಲ(ಬಸವತತ್ವ).ಶ್ರೀಮತಿ ಸುಜಾತಾ ಪಾಟೀಲ (ಕೃಷಿ),ಶ್ರೀ ಶಾಂತಕುಮಾರ ಪುರದಾಳ(ಶಿಕ್ಷಣ), ಸುನೀಲ ಮಾನ್ಪಡೆ (ಸಾಮಾಜಿಕ ಹೋರಾಟ) ಅವರುಗಳು ವಿಶೇಷ ಸನ್ಮಾನಕ್ಕೆ ಭಾಜನರಾಗಲಿದ್ದಾರೆ. ಮಹಾಗಾಂವ ಕಸಾಪ ವಲಯ ಅಧ್ಯಕ್ಷ ಅಂಬಾರಾಯ ಮಡ್ಡೆ, ವಿ ಕೆ ಸಲಗರ ಕಸಾಪ ವಲುದ ಅಧದಯಕ್ಷ ಬಂಡಪ್ಪ ಚಿಲಿ, ಕಮಲಾಪುರ ಕಸಾಪ ಗೌರವ ಕಾರ್ಯದರ್ಶಿಗಳಾದ ರವೀಂದ್ರ ಬಿಕೆ,ಪ್ರಶಾಂತ ಮಾನಕರ, ನಾಗಣ್ಣ ವಿಶ್ವಕರ್ಮ, ಆನಂದ ವಾರಿಕ್ , ಚೇತನ ಮಹಾಜನ ಕಸ್ತೂರಿಬಾಯಿ ರಾಜೇಶ್ವರ,ನೇತ್ರಾವತಿ ರಾಂಪೂರೆ,ಮಲ್ಲಿನಾಥ ಅಂಬಲಗಿ, ಸಂಜುಕುಮಾರ ನಾಟೀಕಾರ,ಫಯಾಜ್ ಕಮಲಾಪುರ ಇತರರು ಭಾಗವಹಿಸಲಿದ್ದಾರೆ.