20 ಮಂದಿ ಚಾಲಕರಿಂದ ಸ್ವಯಂ ರಕ್ತದಾನ

ಮೈಸೂರು:ಏ:28: ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸ್ವಯಂಪ್ರೇರಿತವಾಗಿ 20 ಚಾಲಕರು ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.
ರಕ್ತದಾನ ಮಾಡಿದ ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹಾಮಾರಿ ಕೋರೋನಾ ಸಂದರ್ಭದಲ್ಲಿ ರಾಜ್ಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ .ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಕೂರೂನಾ ನಿಯಂತ್ರಣಕ್ಕೆ ಯುವಕ ಯುವತಿಯರು ನೆರವಾಗಬೇಕು.
ಲಾಕ್ ಡೌನ್ ನಲ್ಲಿ ಸರ್ಕಾರವು ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿದಾಗ ದೇಶಾದ್ಯಂತ ರಕ್ತ ನಿಧಿಗಳು ರಕ್ತದ ಕೊರತೆಯನ್ನು ಎದುರಿಸುತ್ತಿದ್ದು, ಕುರೂನಾ ಲಸಿಕೆ ಪಡೆದವರಿಂದ ಕಡ್ಡಾಯವಾಗಿ 4 ವಾರಗಳವರೆಗೆ ರಕ್ತ ಸಂಗ್ರಹ ಮಾಡುವಂತಿಲ್ಲ ಎಂದು ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ ಸೂಚಿಸಿದ್ದಾರೆ.
ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟು ಸಂದರ್ಭಗಳಲ್ಲಿ ಇರುತ್ತದೆ, ಅಪಘಾತ, ಹೆರಿಗೆ, ಶಸ್ತ್ರ ಚಿಕಿತ್ಸೆ ವೇಳೆ, ಕ್ಯಾನ್ಸರ್ ರೋಗಿಗಳಿಗೆ, ಡಯಾಲಿಸಿಸ್ ರೋಗಿಗಳಿಗೆ ಸೇರಿದಂತೆ ಇನ್ನಿತರ ರೋಗಗಳಿಗೆ ರಕ್ತ ಅತ್ಯಗತ್ಯ. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ. ಆರೋಗ್ಯವಂತ ನಾಗರಿಕರು ಕೂರೂನಾ ಲಸಿಕೆಯನ್ನು ಹಾಕಿಸಿ ಕೊಳ್ಳುವ ಮೊದಲೇ ರಕ್ತದಾನ ಮಾಡುವ ಚಿಂತನೆ ಸಾರ್ವಜನಿಕರು ಮಾಡಬೇಕು.
ಹಾಗಾಗಿ ದಯಮಾಡಿ ಆಸ್ಪತ್ರೆಗಳಲ್ಲಿ ರಕ್ತದ ಅಗತ್ಯ ಪೂರೈಸುವ ಸಲುವಾಗಿ ಆರೋಗ್ಯವಂತ ನಾಗರಿಕರು ಕೂರೂನಾ ಲಸಿಕೆಯನ್ನು ಹಾಕಿಸಿಕೊಳ್ಳುವ ಮೊದಲೇ ರಕ್ತದಾನ ಮಾಡುವ ಬಗ್ಗೆ ಚಿಂತನೆ ಮಾಡಬೇಕು ,ಲಸಿಕೆ ಹಾಕಿಸಿ ಕೊಲ್ಲುವಂತಹ ನಾಗರಿಕ ಸ್ಥಳದಲ್ಲಿ ಇದ್ದಂಥ ಅಧಿಕಾರಿಗಳು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ರಕ್ತದಾನ ಮಾಡಲು ಇಚ್ಛಿಸುವ ದಾನಿಗಳು ಈ ಕೇಂದ್ರದ ದೂರವಾಣಿಗೆ 9243781900 ಸಂಪರ್ಕಿಸಿದರೆ ಮನೆಯಿಂದ ಕರೆದುಕೊಂಡು ಬಂದು ರಕ್ತದಾನ ಮಾಡಿದ ನಂತರ ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಕೊಡಲಾಗುವುದು .ಅಲ್ಲದೆ ದಾನಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಿಂದ ಮುಂದೆ ಅವರಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅಗತ್ಯವಿದ್ದಾಗ ಪ್ರಮಾಣಪತ್ರ ತೋರಿಸಿ ರಕ್ತ ಉಚಿತವಾಗಿ ಪಡೆಯಬಹುದು ಎಂದು ಹೇಳಿದರು.
ವ್ಯವಸ್ಥಾಪಕರು ಸ್ಯಾಮ್ಯುಯೆಲ್ ವಿಲ್ಸನ್, ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ, ಉಪಾಧ್ಯಕ್ಷ ಪ್ರಭಾಕರ್, ಉಪಕಾರ್ಯದರ್ಶಿ ಪುಟ್ಟಬುದ್ಧಿ, ಮಂಜುನಾಥ್, ಮಂಜುನಾಥ. ಎಸ್ ಇತರರಿದ್ದರು.