20 ನೇ ವಾರ್ಡಿನಲ್ಲಿ ವಿಕ್ಕಿ ಪರ ಭರತ್ ಪ್ರಚಾರ ಹೊರಗಿನವರೆಂದು ಭಾವಿಸಬೇಡಿ

ಬಳ್ಳಾರಿ ಏ 24: ನಗರದ 20 ನೇ ವಾರ್ಡಿನಲ್ಲಿ ಬಳ್ಳಾರಿ ಜಿಲ್ಲಾ ಪಾಂಚಾಯ್ತಿಯ ಕೊರ್ಲಗುಂದಿ ಕ್ಷೇತ್ರದ ಸದಸ್ಯ ಭರತ್ ರೆಡ್ಡಿ ನಿನ್ನೆ ಸಂಜೆ ನಗರದ 20 ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿವೇಕ್(ವಿಕ್ಕಿ) ಪರ ಹುಸೇನ್ ನಗರದಲ್ಲಿ ಮತಯಾಚನೆ ಮಾಡಿದರು.
ವಿಕ್ಕಿ ಅವರು ಬೇರೆ ವಾರ್ಡಿನಿಂದ ಬಂದಿದ್ದಾರೆ ಎಂದು ಹೇಳಿ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಮಹತ್ವ ಕೊಡಬೇಡಿ. ಅವರು ಇದೇ ನಗರದಲ್ಲಿ ಇರುವವರು. ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರ ಬಡಜನರ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ನೀಡಲಿದೆಂದರು.