20 ನೇ ವಾರ್ಡಿನಲ್ಲಿ ಬಿಜೆಪಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.05:  ನಗರದ 20ನೇ ವಾರ್ಡ್‌ ನ  ಪಟೆರಲ್ ನಗರ,   ಹುಸೇನ್ ನಗರ ಮೊದಲಾದ ಪ್ರದೇಶಗಳಲ್ಲಿ ಇಂದು  ನಗರದ ಶಾಶಕರಾದ ಜಿ. ಸೋಮಶೇಖರ ರೆಡ್ಡಿ ರವರ ನೇತೃತ್ವದಲ್ಲಿ ಬಿಜೆಪಿಗೆ ಮತ ನೀಡುವಂತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯ್ತು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ ಮಾರುತಿ ಪ್ರಸಾದ್, ಮುಖಂಡರುಗಳಾದ ಕೃಷ್ಣ(ಕಿಟ್ಟಿ), ಶ್ರೀನಿವಾಸ ಮೋತ್ಕರ್, ರಾಜೇಶ್, ರಮೇಶ್, ಬಿ.ಎಸ್. ಪ್ರಭುಕುಮಾರ್ ಸ್ಥಳೀಯ ಅಬೇಕ  ಮುಖಂಡರು ಪಾಲ್ಗೊಂಡಿದ್ದರು.