20 ದ್ವಿಚಕ್ರ ವಾಹನ ವಿತರಣೆ

ಅಥಣಿ :ಮಾ.23: ಯುಗಾದಿಯ ಶುಭದಿನದಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಅವರು ಸುಮಾರು 20 ಜನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ಹಿನ್ನಲೆಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ಹಾಗೂ ಆದಿ ಜಾಂಬವ ನಿಗಮದಿಂದ 20 ದ್ವಿಚಕ್ರವಾಹನಗಳನ್ನು ವಿತರಿಸಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದರು.
ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು ಅಥಣಿ ಮತಕ್ಷೇತ್ರದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅನುಕೂಲವಾಗುವ ಉದ್ದೇಶದಿಂದ ಬೈಕ್ ಕೊಡಲಾಗಿದೆ, ಅವರುಗಳು ನೇರವಾಗಿ ಮನೆ ಮನೆಗೆ ಸೇವೆ ಒದಗಿಸುವ ವ್ಯಾಪಾರ ವಹಿವಾಟು ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಲು ಇದು ಸಹಾಯಕಾರಿಯಾಗಲಿದೆ ಈ ವಾಹನಗಳನ್ನಹ ಸಮರ್ಪಕವಾಗಿ ಸದುಪಯೋಗ ಪಡೆಸಿಕೊಳ್ಳಿ ಎಂದು ಸಲಹೆಕೊಟ್ಟರು.ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸುಮಾರು 40 ಜನರನ್ನು ಆಯ್ಕೆಮಾಡಲಾಗಿದ್ದು ಇಂದು ಮೊದಲನೆ ಕಂತು ಎಂದು ಪ್ರಾಯೋಗಿಕವಾಗಿ ಸುಮಾರು 20 ಜನ ಪಲನುಭವಿಗಳಿಗೆ ವಾಹನ ವಿತರಿಸಲಾಗಿದೆ ಎಂದರು.
ಈ ವೇಳೆ ಮುಖಂಡರಾದ ಗಿರೀಶ ದಿವಾನಮಳ, ನರಸು ಬಡಕಂಬಿ, ರಾಜು ಆಲಬಾಳ, ಪುರಸಭೆ ಸದಸ್ಯ ಕಲ್ಲೇಶ್ ಮಡ್ಡಿ, ಎಸ್ ಆರ್ ಘೂಳಪ್ಪನ್ನವರ, ಮಹಾಂತೇಶ ಬಾಡಗಿ, ಕುಮಾರ ಗೊಟ್ಟಿ, ಶ್ರೀಶೈಲ ಹಳ್ಳದಮಳ, ಶ್ರೀಶೈಲ ನಾಯಿಕ, ಪ್ರದೀಪ ನಂದಗಾಂವ, ರಾಜು ಗುಡೋಡಗಿ ಸೇರಿದಂತೆ ಇತರರಿದ್ದರು.
250 ಲಕ್ಷ ರೂಗಳ ಸಿಸಿ ರಸ್ತೆಗೆ ಭೂಮಿ ಪೂಜೆ,
ಅಥಣಿ : ಪಟ್ಟಣದ ವಾರ್ಡ ನಂ. 20ರಲ್ಲಿ ಶ್ರೀ ರಾಘವೇಂದ್ರ ಮಠದ ಹತ್ತಿರ ಕೆ.ಎ. ಲೋಕಾಪುರ ಕಾಲೇಜದಿಂದ ಹೆಚ್ ಬಿಸಿವರೆಗೆ 250 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಮಾಜಿ ಡಿಸಿಎಂ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿಯವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಅರವಿಂದರಾವ್ ದೇಶಪಾಂಡೆ, ದೀಪಕ ಠಿಕಾರೆ, ಆನಂದ ದೇಶಪಾಂಡೆ, ರಾಜು ಚೌಗಲಾ, ಸಂದೀಪ ಸಂಗೋರಾಮ್, ಅಮರ ದುರ್ಗಣ್ಣವರ, ವಾರ್ಡ ನಂ. 20ರ ಪುರಸಭೆ ಸದಸ್ಯ ರಾಜು ಗುಡೋಡಗಿ, ಪುರಸಭೆ ಸದಸ್ಯ ಮೃಣಾಲಿನಿ ದೇಶಪಾಂಡೆ, ಕಲ್ಲೇಶ ಮಡ್ಡಿ, ದಿಲೀಪ ಲೋಣಾರೆ, ದತ್ತಾ ವಾಸ್ಟರ, ಮಲ್ಲು ಹುದ್ದಾರ, ರಾಜು ಬುಲಬಲೆ, ಬಸವರಾಜ ನಾಯಿಕ, ನರಸು ಬಡಕಂಬಿ, ಗುತ್ತಿಗೆದಾರ ರಾಜು ಆಲಬಾಳ, ಎಸ್ ಆರ್ ಘೊಳಪ್ಪನವರ, ತಿಪ್ಪಣ್ಣ ಭಜಂತ್ರಿ, ಬಿ.ಎನ್ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು