20 ಕೋಟಿ ರೂ. ವೆಚ್ಚದ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಳ ಪರಿಶೀಲನೆ

ಕೊಟ್ಟೂರು ಜೂ 11:‘ಮಲ್ಟೀ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪಟ್ಟಣದ ಸಮೀಪದಲ್ಲಿಯೇ ಯೋಗ್ಯವಾದ ಭೂಮಿ ದೊರೆತ್ತಿದ್ದು ಸುಸ್ಸಜ್ಜಿತವಾಗಿ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಶಿಘ್ರದಲ್ಲಿಯೇ ಚಾಲನೆ ನೀಡಲಾಗುವುದು’ ಎಂದು ಶಾಸಕ ಎಸ್ ಭೀಮನಾಯ್ಕ್ ಹೇಳಿದರು.
ಜಿಲ್ಲಾ ಖನೀಜ ನಿಧಿಯಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಮಂಜೂರಾಗಿರುವ ಆಸ್ಪತ್ರೆ ನಿರ್ಮಾಣಕ್ಕೆ ಇಲ್ಲಿನ ಕೆರೆ ಪಕ್ಕದ 1160 ಬೆ ಸರ್ವೇ ನಂಬರ್ ನ 5.80 ಎಕ್ಕರೆ ಸರ್ಕಾರಿ ಜಮೀನನ್ನು ಗುರುವಾರ ವಿಕ್ಷಿಸಿ ಅವರು ಮಾತನಾಡಿದರು.
‘20 ಕೋಟಿ ರೂ ವೆಚ್ಚದ ಈ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿರಲ್ಲಿದ್ದು,ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದ ಅವರು ಆಸ್ಪತ್ರೆಯಲ್ಲಿ 100 ಹಾಸಿಗೆಗಳು,ಮಕ್ಕಳಿಗೆ, ಹೆರಿಗಾಗೆ ಮತ್ತು ಡಯಾಲೀಸಿಸ್ ಸೇರಿದಂತೆ ಪ್ರತ್ಯಕವಾಗಿ ಆಸ್ಪತ್ರೆ ನಿರ್ಮಾಣವಾಗಲ್ಲಿದ್ದು ಆಯಾ ವಿಭಾಗಗಳಿಗೆ ನುರಿತ ವೈದ್ಯರನ್ನು ನೇಮಿಸಲಾಗುವುದು’ ಎಂದರು.
ಸದರಿ ಜಮೀನು ಸಹಾಯಕ ಆಯುಕ್ತರ ಹೆಸರಿನಲ್ಲಿದ್ದು, ಕಂದಾಯ ಇಲಾಖೆಯ ಅಧೀನದಲ್ಲಿರುವುದರಿಂದ ಅನುಕೂಲವಾಗಿದೆ, ನಾಳೆಯೇ ಜಮೀನನ್ನು ಸರ್ವೇ ಮಾಡಿ ಸಮಗ್ರವಾಗಿ ಮಾಹಿತಿ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಅನಂದ್ ಸಿಂಗ್ ಅವರು ಆಸ್ಪತ್ರೆ ನಿರ್ಮಾಣಕ್ಕೆ ಡಿಎಂಎಪ್ ಫಂಡ್ ನಿಂದ ಅನುಧಾನ ಸಿಗಲು ವಿಶೇಷ ಕಾಳಜಿ ವಹಿಸಿದ್ದು, ಜಾಗ ಅಂತಿಮಗೋಳಿಸಿದ ನಂತರ ಸಚಿವ ಸಂಪುಟದಲ್ಲಿ ಇಬ್ಬರು ಸೇರಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲ್ಲಿದ್ದೆವೆ ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿಸದಸ್ಯ ಎಂಎಂಜೆ ಹರ್ಷವರ್ಧನ್, ಮಾಜಿ ಜಿಪಂ ಸದಸ್ಯ ದೊಡ್ಡರಾಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬೂದಿಶಿವಕುಮಾರ್, ಮುಖಂಡರಾದ ಸುಧಾಕರ್ ಪಾಟೀಲ್, ದ್ವಾರಕೀಶ್, ತಹಶೀಲ್ದಾರ್ ಜಿಅನಿಲ್ ಕುಮಾರ್, ಇಒ ಹಾಲಸಿದ್ದಪ್ಪ ಪೂಜೇರಿ, ಪಟ್ಟಣ ಪಂಚಾಯ್ತಿ ಮುಖ್ಯಧಿಕಾರಿ ಗಿರೀಶ್ ಇದ್ದರು.