20 ಕೊರೊನಾ ಪಾಸಿಟಿವ್ ಪತ್ತೆ:01 ಸಾವು

ಕಲಬುರಗಿ:ಜ.12: ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 20 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , 01 ಸಾವು ಸಂಭವಿಸಿದೆ. ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 21304 ಪಾಸಿಟಿವ್ ಕೇಸ್ ಗಳಾದಂತಾಗಿದೆ.
14 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 20770 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.
208 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒ ಟ್ಟು 01 ಸಾವು ಸಂಭವಿಸಿದೆ. ಇಂದು 01 ಸಾವಿನೊಂದಿಗೆ ಈ ವರೆಗೆ 326 ಜನರು ಸಾವಿಗೀಡಾದಂತಾಗಿದೆ .