20 ಕೆಜಿ ತೂಕ ಇಳಿಸಿಕೊಂಡು ನಟಿ ಖುಷ್ಬೂ

ಚೆನ್ನೈ, ಡಿ. ೬- ದಕ್ಷಿಣ ಭಾರತದ ಖ್ಯಾತ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಬರೋಬ್ಬರಿ ೨೦ ಕೆಜಿ ತೂಕ ಇಳಿಸಿಕೊಂಡಿದ್ದು, ಅಂದಿನ ಹಾಗೂ ಇಂದಿನ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ನಟ್ಟಿಗರು ಹೊಸ ಲುಕ್‌ಗೆ ಫಿದ್ ಆಗಿದ್ದಾರೆ.
ತೂಕ ಇಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ದಕ್ಷಿಣ ಭಾರತದ ಖ್ಯಾತ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಬರೋಬ್ಬರಿ ೨೦ ಕೆಜಿ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಹೊಸ ಲುಕ್ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.
“ನಾನು ಆರೋಗ್ಯವಂತಳಾಗಿದ್ದೇನೆ. ಆರೋಗ್ಯವೇ ಸಂಪತ್ತು ಎಂಬುದು ನೆನಪಿರಲಿ. ನೀವು ಅನಾರೋಗ್ಯದಿಂದ ಬಳಲುತ್ತಿದ್ದೇ ಎಂದು ಕೇಳುವವರಿದ್ದರೆ ನಿಮ್ಮ ಕಾಳಜಿಗೆ ಧನ್ಯವಾದಗಳು. ನಾನು ಹಿಂದೆಂದೂ ಇಷ್ಟು ಫಿಟ್ ಆಗಿರಲಿಲ್ಲ ಎಂದು ನಟಿ ಟ್ವೀಟ್ ಮಾಡಿದ್ದಾರೆ.
ಈ ಫೋಟೋಗಳನ್ನು ಕಂಡ ಕೆಲವರು ನಟಿಯ ಸೌಂದರ್ಯವನ್ನು ಹೊಗಳಿದ್ದು, ಇನ್ನೂ ಕೆಲವರು ತೂಕ ಇಳಿಸಿಕೊಳ್ಳಲು ಟಿಪ್ಸ್ ಕೊಡಿ ಅಂತಾ ಕೇಳಿದ್ದಾರೆ. ಇದಕ್ಕೆ ಖುಷ್ಬೂ, ಹಾರ್ಡ್ ವರ್ಕ್ ಮತ್ತು ಡಯಟ್ ಜೊತೆಗೆ ವರ್ಕ್ ಔಟ್ ಮಾಡಿ ಎಂದು ಉತ್ತರ ನೀಡಿದ್ದಾರೆ.
ಖುಷ್ಬೂ ಅವರ ಸ್ಲಿಮ್ ಅವತಾರದ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ೩ ತಿಂಗಳಲ್ಲಿ ೨೦ ಕೆಜಿ ತೂಕ ಇಳಿಸಿಕೊಂಡಿದ್ದಾರೆ ಇನ್ನು ೧೦ ಜನ ತನ್ನನ್ನು ನೋಡಿ ತೂಕ ಇಳಿಸಿಕೊಂಡು ಫಿಟ್ ಆಗಿದ್ದರೆ ಅದೇ ನನ್ನ ಯಶಸ್ಸು ಎಂದು ಖಷ್ಬೂ ಹೇಳಿದ್ದಾರೆ. ಇತ್ತೀಚೆಗೆ ತೆರೆಕಂಡ ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾದಲ್ಲಿ ಖುಷ್ಬೂ ಕಾಣಿಸಿಕೊಂಡಿದ್ದರು.
ಕಲಿಯುಗ ಪಾಂಡವರು ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾದ ಖುಷ್ಬೂ ಆ ನಂತರ ತಮಿಳಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸುಂದರ್ ಅವರನ್ನು ಮದುವೆಯಾದ ನಂತರ ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಕುಷ್ಬೂ ಸದ್ಯ ತಮಿಳು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ.