20 ಆಕ್ಸಿಜನ್ ಕಾನ್ಸನ್ ಟ್ರೇಟ್ ಗಳ ಕೊಡುಗೆ

ಚಿತ್ರದುರ್ಗ.ಜೂ.೧; ಜಿಲ್ಲೆಯ ಕೊವಿಡ್ ರೋಗಿಗಳ ಆಮ್ಲಜನಕ ಕೊರತೆ ನೀಗಿಸಲು   ಗಣಿ ಮಾಲೀಕರು, ಉದ್ಯಮಿಗಳು  ಮತ್ತು ಇಆರ್ ಎಂ ಸಮೂಹ ಅಧ್ಯಕ್ಷರು ಆದ   ಆರ್. ಪ್ರವೀಣ್ ಚಂದ್ರ ಮುಂದಾಗಿದ್ದಾರೆ.ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿ ಮತ್ತು ಉಕ್ಕು ಉದ್ಯಮ ಹೊಂದಿರುವ ಇಆರ್ ಎಂ ಸಮೂಹದ ಅಧ್ಯಕ್ಷ ಆರ್. ಪ್ರವೀಣ್ ಚಂದ್ರ   ಜಿಲ್ಲೆಯ ಜಾನ್ ಮೈನ್ಸ್ ವತಿಯಿಂದ   20 ಆಕ್ಸಿಜನ್ ಕಾನ್ಸನ್ ಟ್ರೇಟ್  ಗಳನ್ನು ಚಿತ್ರದುರ್ಗ ಜಿಲ್ಲೆಯ  ಶಾಸಕರಾದ  ಜಿ .ಹೆಚ್ . ತಿಪ್ಪಾರೆಡ್ಡಿ, ಜಿಲ್ಲೆಯ ಆರೋಗ್ಯಾಧಿಕಾರಿಗಳಾದ  ಡಾ . ಪಾಲಾಕ್ಷಪ್ಪ  ಸಮ್ಮುಖದಲ್ಲಿ    ಜಿಲ್ಲಾ ಆಡಳಿತಕ್ಕೆ   ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು . 

ಈ ಸಂದರ್ಭದಲ್ಲಿ ಮಾತನಾಡಿದ  ಚಿತ್ರದುರ್ಗ ಜಿಲ್ಲೆಯ ಶಾಸಕರಾದ  ತಿಪ್ಪಾರೆಡ್ಡಿ ಯವರು   ಆರ್. ಪ್ರವೀಣ್ ಚಂದ್ರ ಇವರು ಯುವ  ಉದ್ಯಮಿಗಳಾಗಿದ್ದು  ಜಿಲ್ಲೆಯಲ್ಲಿ ಕೊವಿಡ್ -೧೯ ನಿಗ್ರಹಿಸಲು ತಮ್ಮ ಸಂಸ್ಥೆಯ ಸಿಎಸ್ ಆರ್ ಅಡಿಯಲ್ಲಿ  ಅನೇಕ ಕೊಡುಗೆಗಳನ್ನು ನೀಡಿದ್ದು  ಚಿತ್ರದುರ್ಗ ಜಿಲ್ಲಾಡಳಿತ ಮತ್ತು ಸರ್ಕಾರದ ಪರವಾಗಿ ಅಭಿನಂದಿಸುವುದಾಗಿ  ತಿಳಿಸಿದರು. 
 ಜಿಲ್ಲಾಧಿಕಾರಿಗಳು ಶ್ರೀಮತಿ .ಕವಿತಾ ಮನ್ನಿಕೇರಿ ದೀಪಕ್ ,  ಸಹಾಯಕ ಪ್ರಧಾನ ವ್ಯವಸ್ಥಾಪಕರರಾದ  ರುದ್ರಪ್ಪ , ರವಿ ರಂಗಸ್ವಾಮಿ , ವಿನಯ್ ಹಾಜರಿದ್ದರು .