20 ಅನಧಿಕೃತ ವೃತ್ತಗಳು ಹಾಗೂ ಧಾರ್ಮಿಕ ಕಟ್ಟಡಗಳ ತೆರವು

ಬೀದರ:ಮಾ.24: ತಾಲ್ಲೂಕು ಆಡಳಿತವು ಎರಡು ದಿನಗಳಲ್ಲಿ ತಾಲ್ಲೂಕಿನಲ್ಲಿ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಒಟ್ಟು 20 ಧಾರ್ಮಿಕ ಕಟ್ಟಡ ಹಾಗೂ ವೃತ್ತಗಳನ್ನು ತೆರವುಗೊಳಿಸಿದೆ.

ಸಂಬಂಧಪಟ್ಟವರಿಗೆ ನೋಟಿಸ್ ಕೊಟ್ಟು, ಎರಡು ಬಾರಿ ಸಭೆ ನಡೆಸಿ ಮನವೊಲಿಸಿದ ಬಳಿಕ ತಹಶೀಲ್ದಾರ್ ಗಂಗಾದೇವಿ ಅವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಸೋಮವಾರ ಕೌಠಾ- ಚಿಕ್ಕಪೇಟೆ ಮಾರ್ಗದಲ್ಲಿನ ಒಟ್ಟು 17 ವೃತ್ತ ಹಾಗೂ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿದರೆ, ಮಂಗಳವಾರ ಕಮಠಾಣ -ಬಗದಲ್ ಮಾರ್ಗದಲ್ಲಿನ ಮೂರು ವೃತ್ತಗಳನ್ನು ತೆರವು ಮಾಡಲಾಗಿದೆ.

ಮೊದಲ ದಿನ ಪೊಲೀಸ್ ಬಂದೋಬಸ್ತ್‍ನಲ್ಲಿ ಕೌಠಾ ಸೇತುವೆ ಬಳಿಯ ಅಕ್ಕಮಹಾದೇವಿ ವೃತ್ತದಿಂದ ತೆರವು ಕಾರ್ಯಾಚರಣೆ ಶುರು ಮಾಡಲಾಯಿತು. ಜನವಾಡದ ಮಹಾದೇವ ಮಂದಿರ, ಹನುಮಾನ ಮಂದಿರ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಮರಕಲ್ ಗ್ರಾಮದ ಭಗತ್‍ಸಿಂಗ್ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ದರ್ಗಾ, ಚಿಕ್ಕೇಟೆಯಲ್ಲಿ ಇರುವ ವೃತ್ತಗಳನ್ನು ತೆರವುಗೊಳಿಸಲಾಯಿತು.