20ರಂದು ಅರ್ಬನ್ ಬ್ಯಾಂಕ್ ಸರ್ವ ಸದಸ್ಯರ ಸಭೆ

ಹಿರಿಯೂರು.ಡಿ.19: ಹಿರಿಯೂರು ಅರ್ಬನ್ ಕೋ ಆಪರೇಟಿವ್  ಬ್ಯಾಂಕ್ ನ 2019-2020ನೇ ಸಾಲಿನ  ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಇದೇ ಡಿಸೆಂಬರ್ 20ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಬ್ಯಾಂಕ್‌ನ ಅಧ್ಯಕ್ಷರಾದ ಆರ್ ವಸಂತ್‌ಕುಮಾರ್ ಇವರ  ಅಧ್ಯಕ್ಷತೆಯಲ್ಲಿ ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಶ್ರೀ ವಾಗ್ದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಸಲು ಏರ್ಪಡಿಸಲಾಗಿದೆ  ಎಂದು ಬ್ಯಾಂಕ್‌ನ  ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ಟಿ.ರಂಗಸ್ವಾಮಿ ಪತ್ರಿಕೆಗೆ ತಿಳಿಸಿದ್ದಾರೆ. ಬ್ಯಾಂಕ್ ನ ಸರ್ವ ಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವರು ಮನವಿ ಮಾಡಿದ್ದಾರೆ.                                                   -ಫೋಟೊ ಇಲ್ಲ. ರಾಘವೇಂದ್ರಸ್ವಾಮಿಯ ವೈಭವದ ಕಾರ್ತೀಕೋತ್ಸವಹಿರಿಯೂರು.ಡಿ.19: ನಗರದ ಶ್ರೀ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಕಾರ್ತೀಕೋತ್ಸವದ ವಿಶೇಷ ಪೂಜಾ ಕಾರ್ಯಕ್ರಮವು ಅತ್ಯಂತ ವೈಭವಯುತವಾಗಿ ನೆರವೇರಿತು. ಇದರ ಅಂಗವಾಗಿ ಸ್ವಾಮಿಗೆ ಅರ್ಚನೆ ಅಬಿಷೇಕ ಹೂವಿನ ಅಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮ ಮಹಾ ಮಂಗಳಾರತಿ  ತೀರ್ಥಪ್ರಸಾದ ವಿನಿಯೋಗ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಜ್ಞಾನ ಭಾಸ್ಕರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಅಯ್ಯಪ್ಪಸ್ವಾಮಿ ಭಕ್ತ ಮಂಡಲಿಯ ಗುರುಸ್ವಾಮಿಯವರಾದ ಸದಾನಂದ ಸ್ವಾಮೀಜಿ ಹಾಗೂ ಅರ್ಚಕರಾದ ಮಂಜುನಾಥ್, ಮಲ್ಲೇಶ್, ಬೃಂದಾವನ ಮಿತ್ರಕೂಟದ ನಾಗರಾಜ್ ಹಾಗೂ ಸದಸ್ಯರು ರಾಮಣ್ಣ, ವರದರಾಜ್ ರವಿಂದ್ರನಾಥ್, ಕಿರಣ್‌ಮಿರಜ್ಕರ್ ಮತ್ತು  ಅನೇಕ ಭಕ್ತರು ಭಾಗವಹಿಸಿದ್ದರು.