
ಬೀದರ್:ಮಾ.15: ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 20ನೆ ಅಖಿಲ ಭಾರತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಲಿದ್ದು, ಸಮ್ಮೇಳನದ ಅಂಗವಾಗಿ ಇಂದು ತಾಯಿ ಭೂವನೇಶ್ವರಿ ದೇವಿಯ ಭವ್ಯ ಮೆರವಣಿಗೆ ಜರುಗಿತು. ಹಾಗೆ ಸಮ್ಮೇಳನಾಧ್ಯಕ್ಷರಾದ ಪೆÇ್ರ.ಸಿದ್ರಾಮಪ್ಪ ಮಾಸಿಮಾಡೆ ದಂಪತಿಗಳ ಭವ್ಯ ಮೆರವಣಿಗೆ ಜರುಗಿತು.
ನಗರದ ಬಿ.ವಿ.ಬಿ ಕಾಲೇಜು ಅವರಣದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ವೃತ್ತಗಳಾದ ರಾಣಿ ಕಿತ್ತೂರು ಚನ್ನಮ್ಮ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವೇರ ವೃತ್ತ, ಮಹಾವೀರ ಸರ್ಕಲ್, ಭಗತಸಿಂಗ ವೃತ್ತ, ಅಂಬೇಡ್ಕರ್ ಸರ್ಕಲ್, ಶಿವಾಜಿ ಚೌಕ್, ಹರಳಯ್ಯ ವೃತ್ತ, ಮೋಹನ ಮಾರ್ಕೆಟ್, ರೋಟ್ರಿ ಸರ್ಕಲ್, ನೆಹರು ಕ್ರೀಡಾಂಗಣ ಮೂಲಕ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರ ತಲುಪಿತು.
ಮೆರವಣಿಯುದ್ದಕ್ಕೂ ಡೊಳ್ಳು ಕುಣಿತ, ಹಲಗೆ ವಾದ್ಯ ಹಾಗೂ ಮುಖವಾಡ ತಂಡಗಳಿಂದ ಮೆರವಣಿಗೆಯ ಸೋಭೆ ಹೆಚ್ಚಿಸಿದವು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ವಾದ್ಯ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರ್ಯಕಾಂತ ನಾಗಮಾರಪಳ್ಳಿ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಬಸಬುರಾವ ದಾನಿ, ಡಾ.ಸಿ.ಆನಂದರಾವ, ಡಾ.ರಜನೀಶ ವಾಲಿ, ಡಾ.ಪಿ.ವಿಠಲರೆಡ್ಡಿ, ವೈಜಿನಾಥ ಕಮಠಾಣೆ, ವಿಜಯಕುಮಾರ ಪಾಟೀಲ ಯರನಳ್ಳಿ ಎಂ.ಎಸ್ ಮನೋಹರ, ಶಶಿ ಹೊಸಳ್ಳಿ ಶಿವಶಂಕರ ಟೋಕರೆ, ಶಿವಕುಮಾರ ಕಟ್ಟೆ ಸೇರಿದಂತೆ ನೂರಾರು ಕಲಾವಿದರು, ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು, ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿದ್ದರು.