20ನೇ ಕನ್ನಡ ಸಾಹಿತ್ಯ ಪರಿಷತ್ತು ನುಡಿ ಜಾತ್ರೆಗೆ ಬನ್ನಿ : ಅಜಯಕುಮಾರ ಎಸ್. ಬಿರಾದಾರ

ಕಲಬುರಗಿ:ಫೆ.20: 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನ ಫೆಬ್ರುವರಿ 26 ಮತ್ತು 27 ರಂದು ಡಾ. ಎಸ್. ಎಮ್. ಪಂಡಿತ ರಂಗ ಮಂದಿರ ಕಲಬುರಗಿಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಟಿ.ಎಂ. ಭಾಸ್ಕರ್ ರವರನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಿಂದ ವಿವಿಧ ಕಲಾ ಮೇಳಗಳೊಂದಿಗೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಭಾಗವಹಿಸಿ, ಸಾಹಿತ್ಯದ ಸವಿಯನ್ನು ಸವಿಯಲು ಆಗಮಿಸಿ ಯಶಸ್ವಿಗೊಳಿಸಬೇಕು.
ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಈ ಭಾಗದ ಸಾಹಿತ್ಯ ಪ್ರೇಮಿಗಳಿಗೆ ಅತೀವ ಸಂತೋಷ ತಂದಿದೆ. ಕವಿಗಳು, ಕಲಾವಿದರು, ಸಾಹಿತಿಗಳು, ಸಂಸ್ಕøತಿ ಕ್ಷೇತ್ರದ ಪ್ರತಿಭಾವಂತರು, ಜಾನಪದ ಕಲಾವಿದರು, ಶಿಕ್ಷಕರು ಹೀಗೆ ಪ್ರತಿಯೊಬ್ಬರು ಅತ್ಯುತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೋಳಿಸಲು ಉತ್ತರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಅಜಯಕುಮಾರ ಎಸ್. ಬಿರಾದಾರ ತಿಳಿಸಿದ್ದಾರೆ.