20,ಜಂಗಮ ವಟುಗಳಿಗೆ ದೀಕ್ಷೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಸೆ.08: ಪಟ್ಟಣದ  ಆರಾಧ್ಯ ದೈವ ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ  ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪುರಾಣ ಪ್ರವಚನಗಳನ್ನು ಏರ್ಪಿಡಿಸಿದ್ದು ಇದೇ ಕಾರ್ಯಕ್ರಮದಡಿ  ಬ್ರಾಹ್ಮೀಮುಹೂರ್ತದಲ್ಲಿ  ಶ್ರೀ ಮಠದಲ್ಲಿ 20 ಜಂಗಮ ವಟುಗಳಿಗೆ ದೀಕ್ಷೆ ನೀಡಲಾಯಿತು.
ಕೂಡ್ಲಿಗಿ ಹಿರೇಮಠ ಪ್ರಶಾಂತ ಸಾಗರ ಸ್ವಾಮೀಜಿಯವರು ಶಾಸ್ತ್ರೋಕ್ತವಾಗಿ ಜಂಗಮ ವಟುಗಳಿಗೆ ದೀಕ್ಷೆ ನೀಡಿ ಜಂಗಮ ವಿಧಿ ವಿಧಾನಗಳನ್ನು ಮತ್ತು ಪೂಜಾ ಕೈಂಕಾರ್ಯಗಳ ಬಗ್ಗೆ ಬೋಧಿಸಿ ಆಶಿರ್ವಾದಿಸಿದರು.
ಈ ವೇಳೆ ಶ್ರೀಮಠದ ಧರ್ಮಕರ್ತರು ಸಿಎಚ್ಎಂ ಗಂಗಾಧರ,  ಸಿಎಚ್ಎಂ ನಾಗರಾಜ್,ಅರ್ಚಕರು ಹಾಗೂ ಜಂಗಮ ವಟುಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.