2.20 ಕೋ.ರೂ.ಗಳ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಚರಂತಿಮಠ, ಸಂಸದ ಗದ್ದಿಗೌಡರ ಭೂಮಿಪೂಜೆ


ಬಾಗಲಕೋಟೆ,ನ.07 : ಕ್ಷೇತ್ರದ ಶಾಸಕ ಡಾ.ವೀರಣ್ಣ ಚರಂತಿಮಠ ಹಾಗೂ ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಬಾಗಲಕೋಟೆ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸುಮಾರು 2.20 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಮುಚಖಂಡಿ ಗ್ರಾಮದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಕೈಗೊಳ್ಳಲಾಗುವ 20 ಲಕ್ಷ ರೂ.ಗಳ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ ಮತ್ತು ಪಿಡಬ್ಲುಡಿ ವತಿಯಿಂದ ಮಾಡಲಾಗುವ 22 ಲಕ್ಷ ರೂ.ಗಳ ಸರಕಾರಿ ಹಿರಿಯ ಪ್ರಾಥಮಿ ಶಾಲೆಯ 2 ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಡಾ.ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.
ನೀಲಾನಗರದಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ಹೆಚ್ಚುವರಿ ಕೊಠಡಿಗಳ ನಿರ್ಮಾಣ, 5 ಲಕ್ಷ ರೂ.ಗಳ ವೆಚ್ಚದ ಶೌಚಾಲಯ ಕಟ್ಟಡ ಹಾಗೂ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ 2.50 ಲಕ್ಷ ರೂ.ಗಳ ವೆಚ್ಚದಲ್ಲಿ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ನೆರವೇರಿಸಿದರು.
ಶಿರೂರ ಗ್ರಾಮದಲ್ಲಿ ಜನರಲ್ ಕಾಲೋನಿಗಳಲ್ಲಿ 40 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಸಿ.ರಸ್ತೆಗಳ ನಿರ್ಮಾಣ, ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗದ 50 ಲಕ್ಷ ರೂ.ಗಳ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ, 5 ಲಕ್ಷ ರೂ.ಗಳ ವೆಚ್ಚದ ಅಂಗನವಾಡಿ ಕೇಂದ್ರಗಳ ದುರಸ್ತಿ ಕಾಮಗಾರಿ ಹಾಗೂ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ 2.50 ಲಕ್ಷ ರೂ.ಗಳ ವೆಚ್ಚದಲ್ಲಿ ಕಟ್ಟಲಾಗುವ ಶೌಚಾಲಯ ಕಟ್ಟಡದ ಕಾಮಗಾರಿಗಳಿಗೆ ಶಾಸಕ ಚರಂತಿಮಠ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಭೂಮಿ ಪೂಜೆ ನೆರವೇರಿಸಿದರು.
ಬೆನಕಟ್ಟಿ ಗ್ರಾಮದಲ್ಲಿ 15 ಲಕ್ಷ ರೂ.ಗಳ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ, ಮನ್ನಿಕಟ್ಟಿ ಗ್ರಾಮದಲ್ಲಿ 14 ಲಕ್ಷ ರೂ.ಗಳ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ ಹಾಗೂ ಕಿರಸೂರ ಗ್ರಾಮದಲ್ಲಿ 14 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಸಿ.ಆರ್.ಪರನಗೌಡರ, ಮುಚಖಂಡಿಯ ಗುರುಬಸವ ಸೂಳಿಬಾವಿ, ಪರಶು ಛಬ್ಬಿ, ನೀಲಾನಗರದ ಜಿಪಂ ಸದಸ್ಯ ರಂಗಪ್ಪ ಗೌಡರ, ನಾಗೇಶ ಪೂಜಾರಿ, ಶಿರೂರಿನ ಸಿ.ಎಂ.ಪ್ಯಾಟಿಶೆಟ್ಟರ, ಬಿಟಿಡಿಎ ಮಾಜಿ ಅಧ್ಯಕ್ಷ ಸಿ.ವ್ಹಿ.ಕೋಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಶೇಖಪ್ಪ ಮಾಚಾ, ಸಂಗಪ್ಪ ನೆರಕಿ, ತಾಪಂ ಸದಸ್ಯ ರಾಜಶೇಖರ ಅಂಗಡಿ, ಕಲ್ಲಪ್ಪ ಭಗವತಿ, ಪ್ರಶಾಂತ ಕೋಟಿ, ಬೆನಕಟ್ಟಿಯ ರವಿ ಅರಿಷಿಣಗೋಡಿ, ಮಂಜು ಗೌಡರ ಮುಂತಾದವರು ಉಪಸ್ಥಿತದ್ದರು.